ಮಂಜೇಶ್ವರ: ಕಳಿಯೂರು ಸಂತ ಜೋಸೆಫರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಗೆ ಶಾಲಾ ಹಳೆ ವಿದ್ಯಾರ್ಥಿ, ಕೆನರಾ ಬ್ಯಾಂಕ್ ಸಹ ಪ್ರಧಾನ ಪ್ರಬಂಧಕ ಸಂಪತ್ ಕುಮಾರ್ ಕೆ 3 ಪ್ರಾಜೆಕ್ಟರ್, 1 ಲ್ಯಾಪ್ ಟಾಪ್, 1 ಪ್ರೊಜೆಕ್ಟರ್ ಸ್ಟ್ಯಾಂಡ್ ನ್ನು ಕೆನರಾ ಬ್ಯಾಂಕ್ ವತಿಯಿಂದ ಶಾಲೆಗೆ ದೇಣಿಗೆಯಾಗಿ ನೀಡಿದರು.
ಈ ಸಂದರ್ಭ ಅವರನ್ನು ಶಾಲಾ ಸಂಚಾಲಕ ವಂ ಸ್ವಾಮಿ ಬೇಸಿಲ್ ವಾಸ್ ಸನ್ಮಾನಿಸಿದರು. ವೇದಿಕೆಯಲ್ಲಿ ಕೆನರಾ ಬ್ಯಾಂಕ್ ವರ್ಕಾಡಿ ಶಾಖಾ ಪ್ರಬಂಧಕ ಪ್ರವೀಣ್, ಶಾಲಾ ಎಂ.ಪಿ. ಟಿ.ಎ ಅಧ್ಯಕ್ಷೆ ಸೀತಾಲಕ್ಷ್ಮಿ, ಎಸ್.ಎಸ್.ಜಿ ಕನ್ವಿನರ್ ಜಯಪ್ರಕಾಶ್, ಹಳೆ ವಿದ್ಯಾರ್ಥಿ ಸಂಘದ ಕೋಶಾಧಿಕಾರಿ ಶ್ರೀಪತಿ ಮಾಸ್ತರ್ ಹಾಗೂ ಶಾಲಾ ಮುಖ್ಯೋಪಾಧ್ಯಾಯನಿ ಪುμÁ್ಪವತಿ ಉಪಸ್ಥಿತರಿದ್ದರು.