ತಿರುವನಂತಪುರಂ: ಪಿಣರಾಯಿ ಅವರು ಮನೆಯಿಂದೆದ್ದುಬಂದು ಮುಖ್ಯಮಂತ್ರಿಯಾದವರಲ್ಲ, ಅವರನ್ನು ಮುಖ್ಯಮಂತ್ರಿ ಮಾಡಿದ್ದು ಪಕ್ಷ ಮತ್ತು ಕಾರ್ಯಕರ್ತರು ಎಂದು ಶಾಸಕ ಪಿ.ವಿ.ಅನ್ವರ್ ತಿಳಿಸಿದ್ದಾರೆ.
ಪಕ್ಷದ ಕಾಮ್ರೇಡ್‍ಗಳು ಏನು ಹೇಳಲು ಬಯಸುತ್ತಾರೋ ಅದನ್ನೇ ಹೇಳಿದ್ದೇನೆ. ಅವರಿಗೆ ನಾನು ನಿಷ್ಠ ಎಂದು ಅನ್ವರ್ ಬಹಿರಂಗವಾಗಿ ಹೇಳಿದ್ದಾರೆ. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಪಿ. ಶಶಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ಅವರನ್ನು ಭೇಟಿ ಮಾಡಿದ ಬಳಿಕ ಮುಖ್ಯಮಂತ್ರಿ ವಿರುದ್ಧ ಅನ್ವರ್ ತಿರುಗಿ ಬಿದ್ದಿದ್ದಾರೆ.
ಮುಖ್ಯಮಂತ್ರಿಗೆ ದೂರು ನೀಡಿದ ನಂತರ ಅನ್ವರ್ ಎಂ.ವಿ. ಗೋವಿಂದನನ್ನು ಭೇಟಿಯಾಗಿ ನಂತರ ತಮ್ಮ ನಿಲುವು ಬದಲಿಸಿದರು. ಅನ್ವರ್ ಮಾಧ್ಯಮದವರೊಂದಿಗೆ ಮಾತನಾಡಿ, ಅವರು ಸ್ವಂತ ಬಲದಿಂದ ಮುಖ್ಯಮಂತ್ರಿ ಆಗಲಿಲ್ಲ. ತಾನು ಪಕ್ಷದಿಂದ ಆಯ್ಕೆಯಾದ ವ್ಯಕ್ತಿ ಎಂಬ ಕಾರಣಕ್ಕೆ ಪಕ್ಷಕ್ಕೆ ಹಾಗೂ ಮುಖ್ಯಮಂತ್ರಿಗೆ ನಿಷ್ಠನಾಗಿದ್ದೇನೆ ಎಂದು ಅನ್ವರ್ ಹೇಳಿದ್ದಾರೆ.
ಪಿಣರಾಯಿ ಮುಖ್ಯಮಂತ್ರಿಯಾದದ್ದು ಹೇಗೆ? ಅವರು ನೇರವಾಗಿ ಮನೆಯಿಂದ ಬಂದು ಮುಖ್ಯಮಂತ್ರಿಯಾದದ್ದಲ್ಲ. . ಪಕ್ಷ ಅವರನ್ನು ಮುಖ್ಯಮಂತ್ರಿ ಮಾಡಿತು. ಹಾಗಾದರೆ ಯಾರಿಗೆ ನಿಷ್ಠರಾಗಿರಬೇಕು? ಈ ಸರ್ಕಾರವನ್ನು ಮತ್ತೆ ಅಧಿಕಾರಕ್ಕೆ ತಂದವರು ಜನರು ಮತ್ತು ಪಕ್ಷದ ಸದಸ್ಯರು. ಪಕ್ಷದ ಕಾರ್ಯಕರ್ತರು ಮತ್ತು ಜನರ ಭಾವನೆಗಳನ್ನು ವ್ಯಕ್ತಪಡಿಸಿರುವೆ.ತನ್ನೀ ಭಾವನೆಯನ್ನು ತಿರಸ್ಕರಿಸಬಹುದೇ ಎಂದು ಅನ್ವರ್ ಪ್ರಶ್ನಿಸಿದರು.
ಮುಖ್ಯಮಂತ್ರಿ ವಿಶ್ವಾಸ ದ್ರೋಹ ಮಾಡಿಲ್ಲ. ಆದರೆ ಮುಖ್ಯಮಂತ್ರಿ ನಂಬಿದವರು ಮೋಸ ಮಾಡಿದ್ದಾರೆ. ಮೋಸ ಮಾಡಿದ ವ್ಯಕ್ತಿಯೇ ಇದಕ್ಕೆ ಹೊಣೆ. ಪೋಲೀಸರೇಕೆ ಹೀಗೆ, ಜನರು ಯಾಕೆ ನಿರಂತರವಾಗಿ ದ್ವೇಷಿಸುತ್ತಿದ್ದಾರೆ, ತ್ರಿಶೂರ್ ಪೂರಂ ಏಕೆ ಕಗ್ಗಂಟಾಗುತ್ತಿದೆ, ಮುಖ್ಯಮಂತ್ರಿಗಳು ಭಾಗವಹಿಸುವ ಕಾರ್ಯಕ್ರಮ ಏಕೆ ಅಸ್ತವ್ಯಸ್ತವಾಗಿದೆ, ಮತ್ತು ಅಂತಹ ಕಳಪೆ ಮಟ್ಟದ ಪೋಲೀಸ್ ಇರುತ್ತಾರೆಯೇ. ಪೋಲೀಸರಲ್ಲಿ ಸರ್ಕಾರಿ ವಿರೋಧಿ ಲಾಬಿ ಇದೆ ಎಂದರು.
ಪಕ್ಷಕ್ಕೆ ಮತ್ತು ಮುಖ್ಯಮಂತ್ರಿಗೆ ನೀಡಿರುವ ಸಾಕ್ಷ್ಯಗಳು ಸೂಚಕವಾಗಿವೆ. ಇದನ್ನು ವಿವಿಧ ಸಂಸ್ಥೆಗಳಿಂದ ತನಿಖೆ ನಡೆಸಬೇಕಿದೆ. ಮುಖ್ಯೋಪಾಧ್ಯಾಯರ ಕುರ್ಚಿಯಲ್ಲಿರುವವರ ವಿರುದ್ಧ ಪ್ಯೂನ್ ವಿಚಾರಣೆ ನಡೆಸಿದರೆ ಸರಿಯೇ? ದಕ್ಷ ಅಧಿಕಾರಿಗಳು ತನಿಖೆ ನಡೆಸಬೇಕು. ತನಿಖೆ ಎಲ್ಲಿಗೆ ಹೋಗುತ್ತಿದೆ ಎಂಬುದನ್ನು ನೋಡಲು ನಾನು ಮಧ್ಯಪ್ರವೇಶಿಸುತ್ತೇನೆ. ಯಾರಾದರೂ ಬೋಗಸ್ ತನಿಖೆ ಮಾಡಬಹುದೆಂದು ಭಾವಿಸಿದರೆ, ಅದೂ ಹೊರಬೀಳುತ್ತದೆ. ಈಗಷ್ಟೇ ಹೋರಾಟ ಶುರುವಾಗಿದೆ. ತಾನು ಇದುವರೆಗೂ ಯಾರಿಗೂ ಶರಣಾಗಿಲ್ಲ. ದೇವರು ಮತ್ತು ಪಕ್ಷಕ್ಕೆ ಮಾತ್ರ ಶರಣಾಗತಿ ಎಂದರು.
ಮುಖ್ಯಮಂತ್ರಿಯನ್ನು ಭೇಟಿಯಾದ ಬಳಿಕ ಇಲಿಯಾಗಿ ಮಾರ್ಪಟ್ಟಿರುವರು ಎಂಬ ಟೀಕೆಗೆ, ಇಲಿ ಅಷ್ಟೊಂದು ಕೆಟ್ಟದ್ದಲ್ಲ, ಮನೆಯಲ್ಲಿ ಏನೆಲ್ಲಾ ತೊಂದರೆಯಾಗುತ್ತದೆ ಎಂಬುದು ಗೊತ್ತಿದೆ ಎಂದು ಉತ್ತರಿಸಿದರು.