HEALTH TIPS

ಕೊಲೆ ಅಪರಾಧಿಗಳೀಗ ಕೃಷಿಕರು; ಬಯಲು ಬಂದೀಖಾನೆಯಲ್ಲಿ ಸುಧಾರಣೆ ಕಾರ್ಯ

 ತಿರುವನಂತಪುರ: ತಿರುವನಂತಪುರದಿಂದ 50 ಕಿ.ಮೀ. ದೂರದ ನೆಟ್ಟುಕಾಲತ್ತೇರಿಯಲ್ಲಿರುವ ಬಯಲು ಬಂದೀಖಾನೆ ಮತ್ತು ಸುಧಾರಣಾ ಮಂದಿರದ ಪುರುಷ ಕೈದಿಗಳಿಗೆ ಈಗ ಬಿಡುವಿಲ್ಲದ ದುಡಿಮೆ. ಓಣಂ ಸಮೀಪಿಸುತ್ತಿರುವ ಕಾರಣ, ಅವರಿಗೆ ಕೈತುಂಬಾ ಕೆಲಸ, ಗಳಿಕೆಯ ಅವಕಾಶ...

ಶಿಕ್ಷೆಯ ಅವಧಿ ಮುಗಿದ ಮೇಲೆ ಜೈಲಿನಿಂದ ಬಿಡುಗಡೆಗೊಂಡ ನಂತರ, ಸ್ವಂತ ಉದ್ಯೋಗ ಕಂಡುಕೊಳ್ಳಲು ಅನುವಾಗುವಂತೆ ಇಲ್ಲಿನ ಕೈದಿಗಳಿಗೆ ವಿವಿಧ ಕೌಶಲಗಳನ್ನು ಕಲಿಸಲಾಗುತ್ತಿದೆ.

ಬಿಡುಗಡೆಗೊಂಡ ಕೈದಿಗಳ ಪುನರ್ವಸತಿಗಾಗಿ ಕೈಗೊಂಡಿರುವ ಈ ಪ್ರಾಯೋಗಿಕ ಕ್ರಮಗಳತ್ತಲೇ ಈಗ ಎಲ್ಲ ದೃಷ್ಟಿ ನೆಟ್ಟಿದೆ.

ನೆಟ್ಟುಕಾಲತ್ತೇರಿಯಲ್ಲಿನ 472 ಎಕರೆ ಪ್ರದೇಶವನ್ನು ವಿವಿಧ ತರಬೇತಿ ನೀಡುವುದಕ್ಕೆ ಅಭಿವೃದ್ಧಿಪಡಿಸಲಾಗಿದೆ. ಕೈದಿಗಳು ರಬ್ಬರ್‌ ಕೃಷಿ, ಹೈನುಗಾರಿಕೆ, ಜೇನು ಸಾಕಣೆ ಸೇರಿದಂತೆ ವಿವಿಧ ಕಾರ್ಯಗಳಲ್ಲಿ ತೊಡಗಿದ್ದಾರೆ.

ತಿಳಿದೊ ಇಲ್ಲವೇ ಆಕಸ್ಮಿಕವಾಗಿಯೋ ವ್ಯಕ್ತಿಯನ್ನು ಅಥವಾ ಹಲವರನ್ನು ಕೊಲೆ ಮಾಡಿದ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾದವರು ಈಗ ಕೃಷಿಕರಾಗಿದ್ದು, ಶ್ರಮವಹಿಸಿ ದುಡಿಯುತ್ತಿದ್ದಾರೆ. 20 ವರ್ಷಗಳಿಗಿಂತ ಹೆಚ್ಚು ಕಾಲದಿಂದ ಶಿಕ್ಷೆ ಅನುಭವಿಸುತ್ತಿರುವವರೂ ಇದ್ದಾರೆ.

ಪರಿಶ್ರಮದಿಂದ ಬೆಳೆದ ತರಕಾರಿಗಳು ಸೇರಿದಂತೆ ವಿವಿಧ ಕೃಷಿ ಉತ್ಪನ್ನಗಳು ಕೈಗೆ ಬರುತ್ತಿರುವ ಕಾರಣ ಇಲ್ಲಿನ ಕೈದಿಗಳಲ್ಲಿ ಸಂಭ್ರಮ ಮನೆ ಮಾಡಿದೆ.

'ಇದೊಂದು ರೀತಿ ಕೃಷಿ ಚಿಕಿತ್ಸೆ. ಸಸ್ಯವೊಂದನ್ನು ಬೆಳೆಸುವುದು. ಅದರಲ್ಲಿ ಹೂವರಳಿ, ನಂತರ ಫಲ ಬಿಟ್ಟಾಗ ಕೃಷಿ ಮಾಡಿದ ವ್ಯಕ್ತಿಗೆ ಸಿಗುವ ಆನಂದ, ಅವರಲ್ಲಿ ಕಂಡುಬರುವ ಸಕಾರಾತ್ಮಕ ಬದಲಾವಣೆ ಅನನ್ಯ' ಎಂದು ಬಯಲು ಬಂದೀಖಾನೆ ಪ್ರಭಾರ ಸೂಪರಿಂಟೆಂಡೆಂಟ್ ರಾಜೇಶ್‌ ಕುಮಾರ್‌ ಹೇಳುತ್ತಾರೆ.

'ಓಣಂ ಹಬ್ಬದ ವೇಳೆಯ ಮಾರುಕಟ್ಟೆ ದೃಷ್ಟಿಯಲ್ಲಿಟ್ಟುಕೊಂಡೇ ಇಲ್ಲಿ ನಾವು ವಿವಿಧ ತರಕಾರಿಗಳನ್ನು ಬೆಳೆಯುತ್ತಿದ್ದೇವೆ. ಹಬ್ಬ ಆರಂಭಕ್ಕೂ ಎರಡು ದಿನಗಳ ಮುಂಚೆ ಇವುಗಳನ್ನು ಪೂಜಾಪುರಂನಲ್ಲಿರುವ ನಮ್ಮ ಕೇಂದ್ರ ಕಚೇರಿ ಬಳಿಯ ಮಾರುಕಟ್ಟೆಗೆ ಕಳಿಸುತ್ತೇವೆ' ಎಂದು ಬಯಲು ಬಂದೀಖಾನೆಯ ಕೃಷಿ ಅಧಿಕಾರಿ ಅಜಿತ್‌ ಸಿಂಗ್‌ ಹೇಳುತ್ತಾರೆ.

ಪ್ರಮುಖ ಅಂಶಗಳು

* ಬಯಲು ಬಂದೀಖಾನೆಯಲ್ಲಿ 350ಕ್ಕೂ ಹೆಚ್ಚು ಕೈದಿಗಳಿದ್ದಾರೆ

* ರಬ್ಬರ್‌ ಪ್ಲಾಂಟೇಷನ್‌ ಪ್ರಮುಖ ಉತ್ಪಾದನಾ ಚಟುವಟಿಕೆ

* ಕಳೆದ ಹಣಕಾಸು ವರ್ಷ ಇಲ್ಲಿನ ಉತ್ಪನ್ನಗಳ ಮಾರಾಟದಿಂದ ಲಭಿಸಿದ್ದ ಆದಾಯ ₹2.11 ಕೋಟಿ

* ಬಂದೀಖಾನೆಯಲ್ಲಿರುವ ಕೈದಿಗಳಿಗೂ ಇಲ್ಲಿನ ತರಕಾರಿ ಹಾಲು ಬಳಕೆ

* ಇಲ್ಲಿನ ಕೃಷಿ ಉತ್ಪನ್ನಗಳ ಮಾರಾಟಕ್ಕಾಗಿ ಬಂದೀಖಾನೆ ಮುಖ್ಯದ್ವಾರದಲ್ಲಿ ಮಳಿಗೆ ಸ್ಥಾಪಿಸಲಾಗಿದೆ


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries