ಪೆರ್ಲ: ಪೆರ್ಲದ ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕದ ನೇತೃತ್ವದಲ್ಲಿ ಜಾಗತಿಕ ಆತ್ಮಹತ್ಯೆ ವಿರೋಧಿ ದಿನ ಆಚರಿಸಲಾಯಿತು. ಎನ್ನೆಸ್ಸೆಸ್ ಕಾರ್ಯಕ್ರಮ ಯೋಜನಾಧಿಕಾರಿ ವರ್ಷಿತ್ ಕೆ. ಆತ್ಮಹತ್ಯೆ ವಿರೋಧಿ ಜಾಗೃತಿಯ ಬಗ್ಗೆ ಅರಿವು ಮೂಡಿಸಿದರು. ಸಹಾಯಕ ಯೋಜನಾಧಿಕಾರಿ ಭವ್ಯ ಬಿ. ಅಧ್ಯಕ್ಷತೆ ವಹಿಸಿದ್ದರು. ಸ್ವಯಂ ಸೇವಕಿ ರಂಜಿನಿ ಸ್ವಾಗತಿಸಿ, ಪ್ರಾರ್ಥನ ವಂದಿಸಿದರು.