ಪೆರ್ಲ: ಎಣ್ಮಕಜೆ ಪಂಚಾಯತು ಬಂಟ್ಸ್ ಸರ್ವೀಸ್ ಸೊಸೈಟಿ ವತಿಯಿಂದ ಬಂಟರಕೂಟ ಕಾರ್ಯಕ್ರಮ ಇಡಿಯಡ್ಕ ಕ್ಷೇತ್ರ ಸಭಾಂಗಣದಲ್ಲಿ ಜರಗಿತು
ಇದರ ಅಂಗವಾಗಿ ಬೆಳಿಗ್ಗೆ ಧ್ವಜಾರೋಹಣ, ಭಜನೆ, ಕುಣಿತ ಭಜನೆ,ಸಾಂಸ್ಕøತಿಕ ಕಾರ್ಯಕ್ರಮಗಳು ಜರಗಿದವು. ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ನ್ಯಾಯವಾದಿ ಐ.ಸುಬ್ಬಯ್ಯ ರೈ ಉದ್ಘಾಟಿಸಿದರು. ಬಂಟ್ಸ್ ಸೊಸೈಟಿ ಅಧ್ಯಕ್ಷ ನಾರಾಯಣ ಆಳ್ವ ಎಣ್ಮಕಜೆ ಸಭೆಯ ಅಧ್ಯಕ್ಷತೆವಹಿಸಿದ್ದರು.ಕುಂಬಳೆ ಪಿರ್ಕಾ ಬಂಟ್ಸ್ ಸೊಸೈಟಿ ಅಧ್ಯಕ್ಷ ಪದ್ಮನಾಭ ಶೆಟ್ಟಿ ವಳಮಲೆ,ಕಾಟುಕುಕ್ಕೆ ಕ್ಷೇತ್ರ ಆಡಳಿತ ಮೋಕ್ತೇಸರ ತಾರನಾಥ ರೈ ಪಡ್ಡಂಬೈಲ್, ಜಿಲ್ಲಾ ಬಂಟರ ಸಂಘದ ಕೋಶಾಧಿಕಾರಿ ಚಿದಾನಂದ ಆಳ್ವ, ಜಿಲ್ಲಾ ಬಂಟರ ಸಂಘದ ಸದಸ್ಯ ಬಿ.ಎಸ್.ಗಾಂಭೀರ, ಸದಾನಂದ ಶೆಟ್ಟಿ ಕುದ್ವ, ಕೊರಗಪ್ಪ ರೈ ಅಮೆಕ್ಕಳ, ಹರಿಪ್ರಸಾದ್ ಶೆಟ್ಟಿ, ರಾಜಾರಾಮ ಶೆಟ್ಟಿ ಪಟ್ಲ, ಬಂಟ್ಸ್ ಮಹಿಳಾ ಸರ್ವೀಸ್ ಸೊಸೈಟಿ ಅಧ್ಯಕ್ಷೆ ರಾಜೇಶ್ವರಿ ಮೊದಲಾದವರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಯುಎಇ ಮನಿಎಕ್ಸೆಂಜ್ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ಸುಧೀರ್ ಕುಮಾರ್ ಶೆಟ್ಟಿ ಎಣ್ಮಕಜೆ ,ನಾಟಿ ವೈದ್ಯೆ ನಳಿನಿ ಕುಂಬತ್ತೊಟ್ಟಿ,ನಿವೃತ್ತ ಸೈನಿಕ ಚಂದ್ರಶೇಖರ ರೈ ಬಾಳೆಮೂಲೆ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಎಸ್ಸಸ್ಸೆಲ್ಸಿ ಹಾಗೂ ಪ್ಲಸ್ ಟು ವಿಭಾಗದಲ್ಲಿ 600ಕ್ಕಿಂತ ಅಧಿಕ ಮಾರ್ಕ್ ಗಳಿಸಿದ ಬಂಟ ಸಮಾಜದ ಮಕ್ಕಳನ್ನು ಅಭಿನಂದಿಸಲಾಯಿತು. ಬಂಟ್ಸ್ ಸರ್ವೀಸ್ ಸೊಸೈಟಿ ಕಾರ್ಯದರ್ಶಿ ಶರತ್ಚಂದ್ರ ಶೆಟ್ಟಿ ಶೇಣಿ ಸ್ವಾಗತಿಸಿ ಜತೆ ಕಾರ್ಯದರ್ಶಿ ರಮೇಶ್ಚಂದ್ರ ರೈ ವಂದಿಸಿದರು. ಸುಪ್ರಿಯ ರೈ ನಿರೂಪಿಸಿದರು.