ಬದಿಯಡ್ಕ: ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರೀ ಹಯರ್ ಸೆಕೆಂಡರೀ ಶಾಲೆಯ ಎನ್.ಎಸ್.ಎಸ್. ಘಟಕದ ಆಶ್ರಯದಲ್ಲಿ ಕೆ ಎಸ್ ಬಿ ಟಿ ಸಿ ಕಾಸರಗೋಡು ಇದರ ಸಹಕಾರದೊಂದಿಗೆ ಶಾಲೆಯಲ್ಲಿ ಜೀವದ್ಯುತಿ ರಕ್ತದಾನ ಶಿಬಿರ ಮಂಗಳವಾರ ನಡೆಯಿತು.
ಕಾರ್ಯಕ್ರಮವನ್ನು ಕುಂಬ್ಡಾಜೆ ಗ್ರಾಮ ಪಂಚಾಯತಿ ಅಧ್ಯಕ್ಷ ಹಮೀದ್ ಪೊಸಳಿಗೆ ಉದ್ಘಾಟಿಸಿದರು. ಪ್ರಾಂಶುಪಾಲ ಸತೀಶ ವೈ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯತಿ ಸದಸ್ಯ ಹರೀಶ್ ಗೋಸಾಡ, ಶಾಲಾ ಪಿಟಿಎ ಅಧ್ಯಕ್ಷ ರಾಜಾರಾಮ ಭಟ್ ಮಿತ್ತೂರು ಶುಭ ಹಾರೈಸಿದರು. ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿ ವಿನೋದ್ ಕುಮಾರ್ ಸ್ವಾಗತಿಸಿ,ಎನ್.ಎಸ್.ಎಸ್. ಲೀಡರ್ ಶ್ರೀನಿಧಿ ಎಸ್ ವಂದಿಸಿದರು. ವಿದ್ಯಾರ್ಥಿ ಶ್ರೀನಿಧಿ ಎಸ್ ಕಾರ್ಯಕ್ರಮವನ್ನು ನಿರೂಪಿಸಿದರು.