HEALTH TIPS

ಚುನಾವಣೆಯಲ್ಲಿ ಸೋತರೆ ಮತ್ತೆ ಸ್ಪರ್ಧಿಸಲ್ಲ: ಡೊನಾಲ್ಡ್‌ ಟ್ರಂಪ್

 ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಈ ಬಾರಿ ಸೋತರೆ, 2028ರ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್ ಹೇಳಿದ್ದಾರೆ.

ಈ ಬಗ್ಗೆ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, 'ಇದು ಸಾಧ್ಯವಿಲ್ಲ ಅನಿಸುತ್ತಿದೆ'‌ ಎಂದು ಹೇಳಿದ್ದಾರೆ.

2020ರ ಚುನಾವಣೆಯಲ್ಲಿ ಜೋ ಬೈಡನ್‌ ವಿರುದ್ಧ ಸೋತ ಬಳಿಕ, ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಟ್ರಂಪ್ ಆರೋಪಿಸಿದ್ದರು. ಅದೇ ವಿಚಾರವನ್ನು ಚುನಾವಣಾ ಪ್ರಚಾರದಲ್ಲಿಯೂ ಬಳಸಿಕೊಂಡಿದ್ದರು.

81 ವರ್ಷದ ಜೋ ಬೈಡನ್‌ ಅವರನ್ನು ವಯಸ್ಸಿನ ಕಾರಣಕ್ಕೆ ಟ್ರಂಪ್ ಅವರು ನಿರಂತರವಾಗಿ ಟೀಕೆ ಮಾಡುತ್ತಿದ್ದರು. ಇದರಿಂದಾಗಿ ಬೈಡನ್ ಚುನಾವಣಾ ಕಣದಿಂದ ಹಿಂದೆ ಸರಿದಿದ್ದರು. 2028ರ ವೇಳೆಗೆ ಟ್ರಂಪ್ ಅವರಿಗೆ 82 ವರ್ಷ ಆಗಲಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries