ಮಂಜೇಶ್ವರ: ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ತಲಶ್ಯೇರಿ ಇಲ್ಲಿಕ್ಕುಂ ನಿವಾಸಿ ಫರೀದಾ ಅವರ ಮುಂದಿನ ಚಿಕಿತ್ಸೆಗಾಗಿ ಹಣ ಸಂಗ್ರಹಿಸುವ ಅಂಗವಾಗಿ ಅಮರ್ಶನ್ ಫೌಂಡೇಶನ್ ಆಯೋಜಿಸಿದ್ದ ಕಾರುಣ್ಯಯಾತ್ರೆಗೆ ಮಂಗಳವಾರ ಬೆಳಗ್ಗೆ ಹೊಸಂಗÀಡಿಯಲ್ಲಿ ಚಾಲನೆ ನೀಡಲಾಯಿತು. ಶಾಸಕ ಎ.ಕೆ.ಎಂ.ಅಶ್ರಫ್ ಯಾತ್ರೆಗೆ ಚಾಲನೆ ನೀಡಿದರು.
ನಾಲ್ಕು ಮತ್ತು ಒಂದೂವರೆ ವರ್ಷದ ಇಬ್ಬರು ಮಕ್ಕಳ ತಾಯಿಯಾಗಿರುವ ಇಪ್ಪತ್ತೇಳರ ಹರೆಯದ ಫರೀದಾ ಅವರ ಚಿಕಿತ್ಸೆಗೆ 1.62 ಲಕ್ಷ ರೂ.ಸಂಗ್ರಹಿಸುವ ಲಕ್ಷ್ಯವಿರಿಸಲಾಗಿದೆ.
ತಿಂಗಳಿಗೆ 27 ಲಕ್ಷ ರೂಪಾಯಿ ವೆಚ್ಚದ ನಾಲ್ಕು ಚುಚ್ಚುಮದ್ದುಗಳನ್ನು ಆರು ತಿಂಗಳವರೆಗೆ ನಿರಂತರವಾಗಿ ತೆಗೆದುಕೊಳ್ಳಬೇಕು ಎಂದು ವೈದ್ಯರು ಸೂಚಿಸಿದ್ದಾರೆ. ಕಾರುಣ್ಯ ಯಾತ್ರೆಯು ಹಣದ ಆಶಾಕಿರಣವಾಗಿದ್ದು, ಸಂಘಟಕರು ಶುಭ ಹಾರೈಸಿದರು. ಸಂಪೂರ್ಣ ಹಣ ಸಿಗುವವರೆಗೂ ಪ್ರಯಾಣ ಮುಂದುವರಿಯಲಿದೆ ಎಂದು ವ್ಯವಸ್ಥಾಪಕ ಟ್ರಸ್ಟಿ ಅಮರಶಾನ್ ತಲಶ್ಯೇರಿ, ಸಹ ವ್ಯವಸ್ಥಾಪಕ ಟ್ರಸ್ಟಿ ಅಬಿದಾ, ಸದಸ್ಯರಾದ ನೂರು ಪಡನ್ನ, ಶಾಫಿ ಕಾಸರಗೋಡು, ನೌಶಾದ್ ಪಾಲಕುನ್ನು, ಸುಬಿ, ನಿಸಾರ್ ಕುಂಬಳೆ, ಅಜೀಜ್ ಕಾಞಂಗಾಡ್, ಇಕ್ಬಾಲ್ ಉಪ್ಪಳ, ಅಬ್ದುಲ್ಲಾ ಕಜೆ ನೇತೃತ್ವ ವಹಿಸಿದ್ದಾರೆ.