HEALTH TIPS

ದೇಶದಲ್ಲಿ ಮಿಷನ್ ಸ್ಟ್ರೋಕ್ ಅನುμÁ್ಠನ, ಸಮಯೋಚಿತ ಚಿಕಿತ್ಸೆಗೆ ಕೇರಳದ ಮೊದಲ ಘಟಕ ಪತ್ತನಂತಿಟ್ಟದಲ್ಲಿ ಪ್ರಾರಂಭ

             ಪತ್ತನಂತಿಟ್ಟ: ಪಾಶ್ರ್ವವಾಯು ಪೀಡಿತರಿಗೆ ಸಕಾಲದಲ್ಲಿ  ಚಿಕಿತ್ಸೆ ನೀಡುವ ಮೂಲಕ s ಸಹಜ ಜೀವನಕ್ಕೆ ಮರಳಲು ಮಿಷನ್ ಸ್ಟ್ರೋಕ್ ತರಬೇತಿ ಕಾರ್ಯಕ್ರಮವನ್ನು ಪತ್ತನಂತಿಟ್ಟದಲ್ಲಿ ಪ್ರಾರಂಭಿಸಲಾಗಿದೆ.

             ಸಮಯಕ್ಕೆ ಚಿಕಿತ್ಸೆ ನೀಡದಿದ್ದರೆ, ದೇಹಕ್ಕೆ ತೀವ್ರ ಅಸ್ವಸ್ಥತೆ ಅಥವಾ ಸಾವೂ ಸಂಭವಿಸುವ ಕಾಯಿಲೆ ಪಾಶ್ರ್ವವಾಯು. ಆದ್ದರಿಂದ ಆರೋಗ್ಯ ಕಾರ್ಯಕರ್ತರು ಸೇರಿದಂತೆ ಪ್ರತಿಯೊಬ್ಬರಿಗೂ ಜಾಗೃತಿ ಬಹಳ ಮುಖ್ಯ. ಒಂದು ಪ್ರದೇಶದ ಎಲ್ಲಾ ಆರೋಗ್ಯ ಕಾರ್ಯಕರ್ತರಿಗೆ ಸ್ಟ್ರೋಕ್ ತರಬೇತಿಯನ್ನು ನೀಡುವ ಉದ್ದೇಶದಿಂದ ದೇಶದಲ್ಲಿ ಮಿಷನ್ ಸ್ಟ್ರೋಕ್ ಅನ್ನು ಪ್ರಾರಂಭಿಸಲಾಯಿತು. ಆರೋಗ್ಯ ಇಲಾಖೆಯ ನೇತೃತ್ವದಲ್ಲಿ ಇಂಡಿಯನ್ ಅಕಾಡೆಮಿ ಆಫ್ ನ್ಯೂರಾಲಜಿ, ಕೇರಳ ಅಸೋಸಿಯೇಷನ್ ಆಫ್ ನ್ಯೂರಾಲಜಿಸ್ಟ್ ಮತ್ತು ಶ್ರೀ ಚಿತ್ತಿರ ತಿರುನಾಳ್ ಸಂಸ್ಥೆಯ ಸಮಗ್ರ ಸ್ಟ್ರೋಕ್ ಕೇರ್ ಯುನಿಟ್ ಜಂಟಿಯಾಗಿ ಈ ಯೋಜನೆಯನ್ನು ಅನುμÁ್ಠನಗೊಳಿಸಿದೆ. ಈ ಯೋಜನೆಯನ್ನು ಭಾರತದ ಎರಡು ರಾಜ್ಯಗಳಲ್ಲಿ ಪ್ರಾರಂಭಿಸಲಾಗುತ್ತಿದ್ದು,  ಕೇರಳದ ಪತ್ತನಂತಿಟ್ಟ ಜಿಲ್ಲೆಯಲ್ಲಿ ಮೊದಲ ಘಟಕ ಪ್ರಾರಂಭಿಸಲಾಯಿತು. ಮುಂದೆ ಕೋಝಿಕ್ಕೋಡ್ ಜಿಲ್ಲೆಯನ್ನು ಆಯ್ಕೆ ಮಾಡಲಾಗಿದೆ. ಯೋಜನೆಯ ಭಾಗವಾಗಿ ವೈದ್ಯರು ಸೇರಿದಂತೆ ಸುಮಾರು 350 ಉದ್ಯೋಗಿಗಳಿಗೆ ತರಬೇತಿ ನೀಡಲಾಯಿತು.

             ರಾಜ್ಯದಲ್ಲಿ ವೈದ್ಯಕೀಯ ಕಾಲೇಜುಗಳ ಜೊತೆಗೆ ಆರೋಗ್ಯ ಇಲಾಖೆ ಅಡಿಯಲ್ಲಿ ಪ್ರಸ್ತುತ 12 ಜಿಲ್ಲೆಗಳಲ್ಲಿ ಸ್ಟ್ರೋಕ್ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಪತ್ತನಂತಿಟ್ಟದಲ್ಲಿ ಯೋಜನೆಯನ್ನು ಉದ್ಘಾಟಿಸಿದ ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಮಾತನಾಡಿ, ಈ ವರ್ಷ ಮಲಪ್ಪುರಂ ಮತ್ತು ವಯನಾಡು ಜಿಲ್ಲೆಗಳಲ್ಲಿ ಸ್ಟ್ರೋಕ್ ಸೆಂಟರ್‍ಗಳನ್ನು ಸಾಕಾರಗೊಳಿಸಲು  ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries