ಮಂಜೇಶ್ವರ: ತೊಟ್ಟೆತ್ತೋಡಿ ವಾಣಿವಿಲಾಸ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಳೆ ವಿದ್ಯಾರ್ಥಿ ಸಂಘದ ಸಭೆ ವಸಂತ ಭಟ್ ತೊಟ್ಟೆತ್ತೋಡಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಮಾರಂಭದಲ್ಲಿ ಇತ್ತೀಚೆಗೆ ಜಿಲ್ಲಾ ವಿದ್ಯಾಧಿಕಾರಿಯಾಗಿ ಭಡ್ತಿ ಹೊಂದಿದ ಇಬ್ರಾಹಿಂ ಬಿ. ಅವರನ್ನು ಗೌರವಿಸಲಾಯಿತು. ಶಾಲೆಯ ಹಳೆ ವಿದ್ಯಾರ್ಥಿಗಳಾದ ಎಸ್.ಎಸ್.ಎಲ್.ಸಿಯಲ್ಲಿ ಎ ಪ್ಲಸ್ ಗಳಿಸಿದ ಕೌಶಿಕ್ ಶೆಟ್ಟಿ ದೇರಂಬಳ, ದೀಕ್ಷಾ ಸಿ ಚಿಗುರುಪಾದೆ ಇವರನ್ನು ಅಭಿನಂದಿಸಲಾಯಿತು. ಎಸ್. ಎಸ್. ಎಲ್. ಸಿ ಸ್ಕಾಲರ್‍ಶಿಪ್ ಪಡೆದ ಗಿಶಾನ್ ಟಿ.ಸಿ ಇವರನ್ನು ಅಭಿನಂದಿಸಲಾಯಿತು. ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಡಿ.ಇ.ಒ ಇಬ್ರಾಹಿಂ ಅವರು ಶಾಲೆಯ ಕುರಿತು ಹಳೆಯ ನೆನಪುಗಳನ್ನು ಹಂಚಿಕೊಂಡರು. ಹಳೆ ವಿದ್ಯಾರ್ಥಿ, ಶಾಲಾ ಪ್ರಬಂಧಕ ಡಾ.ಜಯಪ್ರಕಾಶ್, ಟಿ.ಕೆ ಲಕ್ಷ್ಮೀಶ, ಬಿ. ದಿನೇಶ್ ಅಮ್ಮೆನಡ್ಕ, ಡಾ.ಚರಣ್, ವಿನೋದ್‍ರಾಜ್, ಉಮೇಶ, ಅಬ್ದುಲ್ ರಜಾಕ್, ಯಶೋಧ ಸಿ., ವಿದ್ಯಾ, ಕೃತಿ, ಹೇಮಾವತಿ, ಗಣೇಶ ಜಪ್ಪ, ದೇವದಾಸ ಸೇನವ ಮೊದಲಾದವರು ಉಪಸ್ಥಿತರಿದ್ದರು.
ಮುಖ್ಯೋಪಾಧ್ಯಾಯಿನಿ ರಾಜೇಶ್ವರಿ ಟೀಚರ್ ಸ್ವಾಗತಿಸಿ, ದೀಕ್ಷಾ ಕೆ., ವಂದಿಸಿದರು. ಜಯಲಕ್ಷ್ಮೀ ಕತ್ತರಿಕೋಡಿ ಕಾರ್ಯಕ್ರಮವನ್ನು ನಿರೂಪಿಸಿದರು.