ಮಧೂರು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಭಕ್ತರ ಶ್ರೇಯೋಭಿವೃದ್ಧಿ, ಶ್ರೀದೇವರ ಪ್ರೀತಿ ಹಾಗೂ ಕೃಪೆಗಾಗಿ ಅಷ್ಟೋತ್ತರ ಶತನಾಳೀಕೇರ ಮಹಾಗಣಪತಿ ಹೋಮ ಸೆ. 8ರಂದು ದೇವಾಲಯದಲ್ಲಿ ಜರುಗಲಿದೆ.
ಕ್ಷೇತ್ರ ತಂತ್ರಿವರ್ಯರಾದ ಬ್ರಹ್ಮಶ್ರೀ ದೇರೆಬೈಲು ಶಿವಪ್ರಸಾದ್ ತಂತ್ರಿಗಳ ಮಾರ್ಗದರ್ಶನ ಹಾಗೂ ನೇತೃತ್ವದಲ್ಲಿ ಹೋಮ ನಡೆಯಲಿದೆ. ಬೆಳಗ್ಗೆ 9ಕ್ಕೆ ಮಹಾಗಣಪತಿ ಹೋಮ ಪ್ರಾರಂಭವಾಗಿ ಮಧ್ಯಾಹ್ನ 12ಕ್ಕೆ ಪೂರ್ಣಹುತಿಗೊಳ್ಳಲಿದೆ.
ವಿಶೇಷ ಸಂಕಲ್ಪ ಸಹಿತ ಪ್ರಾರ್ಥನಾ ಸೇವೆ, ಪ್ರಾರ್ಥನಾ ಸೇವೆ ಹಾಗೂ ಪ್ರಸಾದ ಸೇವೆ ನಡೆಯಲಿರುವುದು. ಸಂಕಲ್ಪ ಸಹಿತ ಪ್ರಾರ್ಥನಾ ಸೇವೆ ಮಾಡಿಸಿದ ಭಕ್ತಾದಿಗಳು ಹೋಮ ಪ್ರಾರಂಭವಾಗುವ ಸಮಯದಲ್ಲಿ ದೇವಸ್ಥಾನದಲ್ಲಿ ಉಪಸ್ಥಿತರಿರಬೇಕು. ಸೇವೆ ಮಾಡಲು ಇಚ್ಚಿಸುವ ಭಕ್ತಾದಿಗಳು ಬ್ರಹ್ಮಕಲಶೋತ್ಸವ ಸಮಿತಿಯ ಕಚೇರಿ(8590172756)ಯನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.