ಕಾಸರಗೋಡು: ವಕೀಲರ ರಾಷ್ಟ್ರೀಯ ಸಂಘಟನೆ ಭಾರತೀಯ ವಕೀಲರ ಪರಿಷತ್ತು ಕಾಸರಗೋಡು ಘಟಕದಿಂದ ಕುಟುಂಬ ಸಂಗಮ ಕಾರ್ಯಕ್ರಮ ಕಾಸರಗೋಡಿನ ಉಡುಪಿ ಗಾರ್ಡನ್‍ನಲ್ಲಿ ಜರುಗಿತು. ಸಂಘಟನೆಯ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಕುಟುಂಬ ಸಂಗಮ ಆಯೋಜಿಸಲಾಗಿತ್ತು.
ಹಿರಿಯ ವಕೀಲ ಐ.ವಿ. ಭಟ್ ಉದ್ಘಾಟಿಸಿದರು. ಸಂಘಟನೆ ಜಿಲ್ಲಾಧ್ಯಕ್ಷ ಎ. ಸಿ.ಅಶೋಕ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕರುಣಾಕರನ್ ನಂಬಿಯಾರ್ ಮುಖ್ಯ ಭಾಷಣ ಮಾಡಿದರು. ರಾಜ್ಯ ಉಪಾಧ್ಯಕ್ಷ ಬಿ.ರವೀಂದ್ರನ್, ಎಂ.ನಾರಾಯಣ ಭಟ್ ಉಪಸ್ಥಿತರಿದ್ದರು. ಪಿ.ಮುರಳೀಧರನ್ ಸ್ವಾಗತಿಸಿದರು. ಬೀನಾ ಕೆ.ಎಂ ವಂದಿಸಿದರು.
ಈ ಸಂದರ್ಭ 57 ನೇ ವಿವಾಹ ವಾರ್ಷಿಕೋತ್ಸವ ಆಚರಿಸುತ್ತಿರುವ ಹಿರಿಯ ವಕೀಲ ಐ.ವಿ ಭಟ್-ಮಹಾಲಕ್ಷ್ಮೀ ಭಟ್ ದಂಪತಿಯನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ವಿವಿಧ ಪರೀಕ್ಷೆಗಳಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಅದ್ವೈತ್ ಕೆ, ಆಶ್ರಿತಾ ಕೆ.ಜಿ ಮತ್ತು ಅನಘಾ ಜಿ.ಕೆ ಅವರನ್ನು ಸನ್ಮಾನಿಸಲಾಯಿತು.ವಿವಿಧ ಕಲಾ ಕಾರ್ಯಕ್ರಮಗಳು ಹಾಗೂ ಓಣಂ ಔತಣಕೂಟ ಆಯೋಜಿಸಲಾಗಿತ್ತು.