ಕಾಸರಗೋಡು: ಲೋಕಸಭೆ ಚುನಾವಣೆ ಸಂದರ್ಭ ಚುನಾವಣಾ ಆಯೋಗ ಶಿಫಾರಸಿನ ಮೇರೆಗೆ ವಿಡಿಯೋಗ್ರಫಿಯಲ್ಲಿ ತೊಡಗಿಸಿಕೊಂಡಿದ್ದ ಛಾಯಾಗ್ರಾಹಕ-ವಿಡಿಯೋಗ್ರಾಫಿಕ್ ಕಾರ್ಮಿಕರಿಗೆ ವೇತನ ನೀಡದಿರುವುದನ್ನು ವಿರೋಧಿಸಿ ಕೇರಳ ಫೆÇೀಟೋಗ್ರಾಫರ್ಸ್ ಮತ್ತು ವಿಡಿಯೋಗ್ರಾಫರ್ಸ್ ಯೂನಿಯನ್ (ಸಿಐಟಿಯು) ಕಾಸರಗೋಡು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲಾಯಿತು.
ಸಿಐಟಿಯು ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಶ್ರೀ ಗಿರಿ ಕೃಷ್ಣನ್ ಧರಣಿಯನ್ನು ಉದ್ಘಾಟಿಸಿದರು. ಕಿಶೋರ್ ಅಧ್ಯಕ್ಷತೆ ವಹಿಸಿದ್ದರು. ಲೋಕಸಭಾ ಚುನಾವಣೆ ನಡೆದು ಹಲವು ತಿಂಗಳು ಕಳೆದರೂ, ರಾತ್ರಿ ನಿದ್ದೆಗೆಟ್ಟು , ಬಿಸಿಲಿಗೆ ಮೈಯೊಡ್ಡಿ ಕೆಲಸ ನಿರ್ವಹಿಸಿರುವ ವಿಡಿಯೋಗ್ರಾಫರ್‍ಗಳಿಗೆ ನಿಗದಿತ ವೇತನವನ್ನು ನೀಡದೆ ಜಿಲ್ಲಾಡಳಿತ ವಂಚನೆಯೆಸಗಿರುವುದು ಖಂಡನೀಯ ಎಂದು ಪರತಿಭಟನಾಕಾರರು ತಿಳಿಸಿದ್ದಾರೆ. ಒಕ್ಕೂಟದ ರಾಜ್ಯ ಖಜಾಂಚಿ ವಿ.ಸುರೇಶ್ ಮುಖ್ಯ ಭಾಷಣ ಮಾಡಿದರು. ಹರೀಶ್ ಕುಞÂಕೊಚ್ಚಿ, ಕೆ.ವಿ.ಕುಞÂಕೃಷ್ಣನ್, ನಾರಾಯಣನ್ ಉಪಸ್ಥಿತರಿದ್ದರು. ಧಿನು ಮೆಕ್ಕಾಟ್ ಸ್ವಾಗತಿಸಿದರು.