HEALTH TIPS

ಪ್ರವಾಸೋದ್ಯಮಕ್ಕೆ ಹಿನ್ನಡೆ: ಸಾಮಾಜಿಕ ಮಾಧ್ಯಮ ಅಭಿಯಾನಕ್ಕೆ ಮುಂದಾದ ಕೇರಳ ಸರ್ಕಾರ

             ತಿರುವನಂತಪುರ: ಇತ್ತೀಚೆಗೆ ಕೇರಳದ ವಯನಾಡ್‌ನಲ್ಲಿ ಸಂಭವಿಸಿದ ಭೀಕರ ಭೂಕುಸಿತದಿಂದಾಗಿ ಪ್ರವಾಸಿಗರಿಗೆ ಕೇರಳ ಸುರಕ್ಷಿತವಲ್ಲ ಎನ್ನುವ ಕಳವಳವನ್ನು ಹೋಗಲಾಡಿಸಿ ಮತ್ತೆ ಪ್ರವಾಸಿಗರನ್ನು ಆಕರ್ಷಿಸಲು ಕೇರಳ ಸರ್ಕಾರ ಯೋಜಿಸಿದೆ.

               ಈ ಹಿನ್ನೆಲೆಯಲ್ಲಿ ಓಣಂ ಋತುವಿನ ಪೂರ್ವದಲ್ಲಿ ವಯನಾಡ್‌ನಲ್ಲಿ ಬ್ಲಾಗರ್‌ಗಳ ಭೇಟಿ ಮಾಡುವ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ನಡೆಸಲು ಮುಂದಾಗಿದೆ.

                  ಈ ಕುರಿತು ಕೇರಳ ಪ್ರವಾಸೋದ್ಯಮ ಮತ್ತು ಲೋಕೋಪಯೋಗಿ ಸಚಿವ ಪಿ. ಎ. ಮೊಹಮ್ಮದ್ ರಿಯಾಸ್ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿ, 'ಜುಲೈ 30 ರಂದು ರಾಜ್ಯದ ಉತ್ತರ ಜಿಲ್ಲೆಯಲ್ಲಿ ಸಂಭವಿಸಿದ ದುರಂತವನ್ನು 'ವಯನಾಡ್ ದುರಂತ' ಎಂದು ಕರೆಯುತ್ತಿರುವುದು 'ದುಃಖಕರ' ಸಂಗತಿಯಾಗಿದೆ. ಭೂಕುಸಿತ ಸಂಭವಿಸಿದ ಚೂರಲ್‌ಮಲ ವಯನಾಡ್‌ನ ಒಂದು ಭಾಗ ಮಾತ್ರ. ಆದರೆ ವಯನಾಡ್ ದುರಂತ ಎಂದು ಸುದ್ದಿ ಹರಡಿದ ಪರಿಣಾಮ, ಜನರು ಇದನ್ನು ಇಂಟರ್‌ನೆಟ್‌ನಲ್ಲಿ ಹುಡುಕುತ್ತಿದ್ದಾರೆ. ಜತೆಗೆ ವಯನಾಡಿನಲ್ಲಿ ಏನೋ ನಡೆಯುತ್ತಿದೆ ಎಂದು ಯೋಚಿಸುತ್ತಿದ್ದಾರೆ. ಇದೇ ಕಾರಣದಿಂದ ರೆಸಾರ್ಟ್‌ಗಳ ಬುಕಿಂಗ್‌ಗಳನ್ನೂ ರದ್ದು ಮಾಡುತ್ತಿದ್ದಾರೆ' ಎಂದರು.

              ' ಚೂರಲ್‌ಮಲದಲ್ಲಿ ಸಂಭವಿಸಿದ ದುರಂತವು ವಯನಾಡ್ ಪ್ರವಾಸೋದ್ಯಮಕ್ಕೆ ಮಾತ್ರವಲ್ಲ, ಕೇರಳ ಪ್ರವಾಸೋದ್ಯಮಕ್ಕೆ ಹಿನ್ನಡೆಯಾಗಿದೆ. ಹೀಗಾಗಿ ವಯನಾಡ್‌ ಪ್ರವಾಸಕ್ಕೆ ಸುರಕ್ಷಿತವಲ್ಲ ಎನ್ನುವ ಜನರ ಮನಸ್ಥಿತಿಯನ್ನು ದೂರಮಾಡಲು ನಿರ್ಧರಿಸಿದ್ದೇವೆ' ಎಂದು ಸಚಿವರು ತಿಳಿಸಿದರು.

'                  ಕಡಲತೀರಗಳು, ಬೆಟ್ಟಗಳು, ಚಹಾ ತೋಟಗಳು ಮತ್ತು ಜಲಪಾತಗಳಿಂದ ತುಂಬಿರುವ ದಕ್ಷಿಣ ಭಾರತದ ರಾಜ್ಯಕ್ಕೆ ಅತಿದೊಡ್ಡ ಆದಾಯವನ್ನು ಗಳಿಸುವ ಮೂಲವಾಗಿದೆ. ಭೂಕುಸಿತದಿಂದ ಹಾನಿಗೊಳಗಾದ ಸ್ಥಳಗಳು ವಯನಾಡ್‌ ಅತಿ ಆಕರ್ಷಕ ಸ್ಥಳಗಳಲ್ಲ. ಅವು 10 ಅಥವಾ 15 ನೇ ಸ್ಥಾನದಲ್ಲಿವೆ. ಅವುಗಳ ಹೊರತಾಗಿ ವಯನಾಡಿನಲ್ಲಿ ಸಾಕಷ್ಟು ಪ್ರವಾಸಿ ಸ್ಥಳಗಳಿವೆ' ಎಂದು ಹೇಳಿದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries