ತಿರುವನಂತಪುರಂ: ಕೇರಳೀಯರು ಇಂದು ತಿರುವೋಣಂ ಅನ್ನು ಸಂತೋಷ ಮತ್ತು ¸ಸಡಗರದಿಂದ ಆಚರಿಸಿದರು. ದುರ್ಭಿಕ್ಷಗಳಿಲ್ಲದ ಸಮೃದ್ಧ ಗತಕಾಲ ಮತ್ತು ಹೊಸ ಯುಗವನ್ನು ಭರವಸೆಯೊಂದಿಗೆ ಸ್ವಾಗತಿಸುವ ಮೂಲಕ ಕೇರಳೀಯರು ಓಣಂ ಸ್ವಾಗತಿಸಿದರು. .
ತಿರುವೋಣ ದಿನದಂದು ಆರನ್ಮುಳ ದೇವಸ್ಥಾನದಲ್ಲಿ ಔತಣವನ್ನು ಸಿದ್ಧಪಡಿಸಲು ನಿನ್ನೆ ಸಂಜೆ ಕತ್ತೂರಿನಿಂದ ತಿರುವೋಣದೋಣಿ ಧವಸ ಧಾನ್ಯಗಳೊಂದಿಗೆ ಆಗಮಿಸಿ ಮುಂಜಾನೆ ದೇವಾಲಯದ ಆವರಣವನ್ನು ತಲುಪಿತು. ತ್ರಿಕಕ್ಕರ ವಾಮನಮೂರ್ತಿ ದೇವಸ್ಥಾನದಲ್ಲಿಯೂ ಕಾರ್ಯಕ್ರಮಗಳು ನಡೆಯಿತು.
ರಾಜ್ಯಾದ್ಯಂತ ಸಂಭ್ರಮದಿಂದ ಹಬ್ಬ ಆಚರಿಸಿತು. ಸಾಂಸ್ಕøತಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿತ್ತು.
ಶನಿವಾರ ಜನರು ತಿರುವೋಣ ದಿನಕ್ಕಾಗಿ ತಯಾರಿ ನಡೆಸಿದ್ದರು. ಎಲ್ಲ ಮಾರುಕಟ್ಟೆಗಳಲ್ಲೂ ಭಾರೀ ಜನಜಂಗುಳಿ ಕಂಡುಬಂತು. ನಿನ್ನೆ ತರಕಾರಿ ಅಂಗಡಿಗಳಲ್ಲಿ ಜನದಟ್ಟಣೆ ಹೆಚ್ಚಾಗಿತ್ತು. ಹೂವಿನ ಮಾರುಕಟ್ಟೆಗಳಲ್ಲೂ ದಟ್ಟಣೆ ಇತ್ತು. ಮನೆಗಳಲ್ಲಿ ಹೂವಿನ ರಂಗೋಲಿ(ಪೂಕಳಂ) ಜೊತೆಗೆ, ಕ್ಲಬ್‍ಗಳು ಮತ್ತು ಸಂಘಟನೆಗಳೂ ಪೂಕಳಂ ರಚಿಸಿ ಸಂಭ್ರಮಿಸಿದರು.
ರಾಜ್ಯಾದ್ಯಂತ ಬಟ್ಟೆ ಅಂಗಡಿಗಳು, ಚಪ್ಪಲಿ ಅಂಗಡಿಗಳು, ಗೃಹೋಪಯೋಗಿ ವಸ್ತುಗಳ ಅಂಗಡಿಗಳು ವ್ಯಾಪಾರ ಬಾಚಿಕೊಂಡಿವೆ. ಬೀದಿಬದಿಯ ವ್ಯಾಪಾರಸ್ಥರು ಕೂಡ ಆಫರ್‍ಗಳನ್ನು ನೀಡಿ ಗ್ರಾಹಕರನ್ನು ಸೆಳೆಯಲು ಪೈಪೆÇೀಟಿ ನಡೆಸಿದ್ದರು. ದೊಡ್ಡ ಮಾಲ್‍ಗಳಲ್ಲೂ ಜನಜಂಗುಳಿ ಇತ್ತು.
ದೂರದ ಸ್ಥಳಗಳಲ್ಲಿ ಕೆಲಸ ಮಾಡುವವರು ಊರಿಗೆ ಆಗಮಿಸಿ ಸಂಭ್ರಮದಲ್ಲಿ ಭಾಗಿಗಳಾದರು. ಬೇರೆ ರಾಜ್ಯಗಳ ಬಸ್ಸುಗಳು ಮತ್ತು ರೈಲುಗಳು ಜನದಟ್ಟಣೆಯಿಂದ ತುಂಬಿದ್ದವು. ಹೊರದೇಶಗಳ ಕೇರಳೀಯರಲ್ಲಿ ಬಹುತೇಕರೂ ಊರಿಗೆ ಓಣಂ ಅವಧಿ ಆಗಮಿಸುವುದು ಸಾಮಾನ್ಯ ರೂಢಿ.
ವಯನಾಡ್ ದುರಂತದ ಹಿನ್ನೆಲೆಯಲ್ಲಿ ಸರ್ಕಾರ ಯಾವುದೇ ಓಣಂ ಆಚರಣೆಯನ್ನು ಆಯೋಜಿಸಿಲ್ಲ. ಆದರೆ ದುರಂತದ ನೋವಿನಿಂದ ಹೊರಬರಲು ಹಬ್ಬಗಳ ಆಚರಣೆ ಮಹತ್ವದ್ದಾಗಿದೆ.