ಕೊಚ್ಚಿ: ಡ್ರೆಡ್ಜಿಂಗ್ ಕಾರ್ಪೋರೇಷನ್ ಆಫ್ ಇಂಡಿಯಾಕ್ಕಾಗಿ ಕೊಚ್ಚಿ ಶಿಪ್‍ಯಾರ್ಡ್ ನಿರ್ಮಿಸುತ್ತಿರುವ ದೇಶದ ಅತಿದೊಡ್ಡ ಡ್ರೆಡ್ಜರ್ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು.
ಕೊಚ್ಚಿ ಶಿಪ್‍ಯಾರ್ಡ್‍ನಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗ ಸಚಿವ ಸರ್ಬಾನಂದ ಸೋನೊವಾಲ್ ಆನ್‍ಲೈನ್‍ನಲ್ಲಿ ಉದ್ಘಾಟಿಸಿದರು. ಡ್ರೆಡ್ಜಿಂಗ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್‍ಗಾಗಿ 12,000 ಕ್ಯೂಬಿಕ್ ಮೀಟರ್‍ಗಳ ಹಾಪರ್ ಸಾಮಥ್ರ್ಯದ ಗೋದಾವರಿ ಹೆಸರಿನ ಟ್ರೇಲಿಂಗ್ ಸಕ್ಷನ್ ಹಾಪರ್ ಡ್ರೆಡ್ಜರ್ (ಟಿಎಸ್‍ಎಚ್‍ಡಿ) ನಿರ್ಮಿಸಲಾಗುತ್ತಿದೆ. ಒಮ್ಮೆ ಪೂರ್ಣಗೊಂಡರೆ, ಇದು ಭಾರತದ ನೌಕಾ ಸಾಮಥ್ರ್ಯಕ್ಕೆ ಮಹತ್ವದ ಮೈಲಿಗಲ್ಲು ಆಗಲಿದೆ. ಭಾರತ ಸರ್ಕಾರದ 'ಮೇಕ್ ಇನ್ ಇಂಡಿಯಾ' ಉಪಕ್ರಮದ ಭಾಗವಾದ ಆತ್ಮನಿರ್ಭರ್ ಭಾರತ್ ಉಪಕ್ರಮದ ಅಡಿಯಲ್ಲಿ ಇದು ಒಂದು ಪ್ರಮುಖ ಹೆಜ್ಜೆಯಾಗಿದೆ.
ಡಿಸಿಐ ಡ್ರೆಡ್ಜ್ ಗೋದಾವರಿಯನ್ನು ಪ್ರಮುಖ ವಿನ್ಯಾಸ ಮತ್ತು ಉತ್ಪಾದನಾ ಕಂಪನಿಯಾದ ನೆದಲ್ಯಾರ್ಂಡ್ಸ್‍ನ ರಾಯಲ್ ಐಸಿಎಚ್ ಸಹಯೋಗದೊಂದಿಗೆ ನಿರ್ಮಿಸಲಾಗುತ್ತದೆ. ಒಮ್ಮೆ ಕಾರ್ಯಾರಂಭಿಸಿದ ನಂತರ, ಈ ಡ್ರೆಡ್ಜರ್ ಭಾರತದಲ್ಲಿ ಇದುವರೆಗೆ ನಿರ್ಮಿಸಲಾದ ತಾಂತ್ರಿಕವಾಗಿ ಸುಧಾರಿತ ಡ್ರೆಡ್ಜರ್ ಆಗಿರುತ್ತದೆ.
ಹಡಗು 127 ಮೀಟರ್ ಉದ್ದ ಮತ್ತು 28 ಮೀಟರ್ ಅಗಲವಿದೆ. ಇದನ್ನು ರಾಯಲ್ ಐ.ಎಚ್.ಸಿ., ನೆದರ್‍ಲ್ಯಾಂಡ್ಸ್‍ನ ಜಾಗತಿಕವಾಗಿ ಮೆಚ್ಚುಗೆ ಪಡೆದ 'ಬೀಗಲ್' ಪ್ಲಾಟ್‍ಫಾರ್ಮ್ ಅಡಿಯಲ್ಲಿ ನಿರ್ಮಿಸಲಾಗುತ್ತದೆ. ಇದು ಭಾರತದ ಎಲ್ಲಾ ಬಂದರು ಮತ್ತು ಜಲ ಸಾರಿಗೆ ಅಭಿವೃದ್ಧಿ ಅಗತ್ಯಗಳನ್ನು ಪೂರೈಸಲು ವಿನ್ಯಾಸಗೊಳಿಸಲಾಗಿದೆ. ದೇಶದ ಬಂದರು ಅಭಿವೃದ್ಧಿ ಚಟುವಟಿಕೆಗಳಲ್ಲಿ ಇದು ನಿರ್ಣಾಯಕವಾಗಲಿದೆ.
ಭಾರತದಲ್ಲಿ ನೆದಲ್ಯಾರ್ಂಡ್ಸ್ ರಾಯಭಾರಿ ಮರಿಸ್ಸಾ ಗೆರಾಡ್ರ್ಸ್, ವಿಪಿಎ ಮತ್ತು ಡಿಸಿಐ ಅಧ್ಯಕ್ಷ ಡಾ. ಎಂ. ಅಂಗಮುತ್ತು, ಡಿಸಿಐ ಎಂಡಿ ದುರ್ಗೇಶ್ ಕುಮಾರ್, ಕೊಚ್ಚಿ ಶಿಪ್‍ಯಾರ್ಡ್ ಸಿಎಂಡಿ ಮಧು ಎಸ್. ನಾಯರ್, ರಾಯಲ್ ನೆದಲ್ಯಾರ್ಂಡ್ಸ್ ರಾಯಭಾರ ಕಚೇರಿಯ ಹಣಕಾಸು ಸಲಹೆಗಾರ ಬರ್‍ಂಡ್ ಸ್ಕೋಲ್ಟ್ಜ್, ಕೊಚ್ಚಿ ಶಿಪ್‍ಯಾರ್ಡ್ ಹಣಕಾಸು ನಿರ್ದೇಶಕ ಜೋಸ್ ವಿಜೆ, ಕಾರ್ಯಾಚರಣೆಗಳ ನಿರ್ದೇಶಕ ಶ್ರೀಜಿತ್ ಕೆ.ಎನ್, ಶಿಪ್‍ಯಾರ್ಡ್ ಕ್ಯಾಪ್ಟನ್ ಕೆ.ಎಂ. ಚೌಧರಿ, ಜನರಲ್ ಮ್ಯಾನೇಜರ್ (ಬಿಡಿ) ಡಿಸಿಐ ರೋಜರ್ ಕ್ಯಾಲಿಸ್, ಕೊಚ್ಚಿ ಶಿಪ್‍ಯಾರ್ಡ್ ಅಧಿಕಾರಿಗಳು, ಡಿಸಿಐ, ರಾಯಲ್ ಐಎಚ್‍ಸಿ ನೆದರ್‍ಲ್ಯಾಂಡ್‍ನ ಹಿರಿಯ ಅಧಿಕಾರಿಗಳು, ಭಾರತೀಯ ನೌಕಾಪಡೆಯ ಅಧಿಕಾರಿಗಳು ಮತ್ತು ಇತರರು ಉಪಸ್ಥಿತರಿದ್ದರು.