ಕಾಸರಗೋಡು: ಚೆರ್ವತ್ತೂರು-ಚೀಮೇನಿ ರಸ್ತೆಯ ಆನಿಕ್ಕಾಡಿ ಎಂಬಲ್ಲಿ ಸ್ಕೂಟರ್ ಹಾಗೂ ಬುಲ್ಲೆಟ್ ಬೈಕ್ ಪರಸ್ಪರ ಡಿಕ್ಕಿಯಾಗಿ, ಸ್ಕೂಟರ್ ಚಾಲಕ ಮೃತಪಟ್ಟಿದ್ದಾರೆ. ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ, ಭೀಮನಡಿ ವಾಳಪ್ಪಳ್ಳಿ ನಿವಾಸಿ ಹಾಗೂ ಚೀಮೇನಿ ಅತ್ತುಟ್ಟಿಯಲ್ಲಿ ವಾಸಿಸುತ್ತಿರುವ ಟಿ. ಅಶ್ರಫ್(49)ಮೃತಪಟ್ಟವರು. ಬುಲ್ಲೆಟ್ ಸವಾರ ನಿಡುಂಬ ನಿವಾಸಿ ಅಖಿಲ್ ಗಂಭೀರ ಗಾಯಗೊಂಡಿದ್ದು, ಕಣ್ಣೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಶ್ರಫ್ ಅವರು ಸ್ಕೂಟರಲ್ಲಿ ಸಂಚರಿಸುತ್ತಿದ್ದ ಸಂದರ್ಭ ಅಪಘಾತ ಸಂಭವಿಸಿದೆ. ಗಂಭೀರ ಗಾಯಗೊಂಡ ಇವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ.
ಅಶ್ರಫ್ ಜಿಲ್ಲಾಧಿಕಾರಿ ಕಚೇರಿಯಲ್ಲಿ ಚಟುವಟಿಕೆ ನಡೆಸುತ್ತಿರುವ ಎಸ್‍ಸಿ-ಎಸ್‍ಟಿ ಸೆಕ್ಷನ್ ಸಿಬ್ಬಂದಿಯಾಗಿದ್ದರು. ಮುಸ್ಲಿಂಲೀಗ್ ಪೋಷಕ ಸಂಘಟನೆಎಸ್‍ಇಯು ಜಿಲ್ಲಾ ಕಾರ್ಯದರ್ಶಿ ಹಾಗೂ ಅತ್ತುಟ್ಟಿ ಜಮಾಅತ್ ಸಮಿತಿ ಸದಸ್ಯರಾಗಿದ್ದರು.