ಮಲಪ್ಪುರಂ: ನಿಲಂಬೂರ್ ಶಾಸಕ ಪಿ.ವಿ.ಅನ್ವರ್ ಆರೋಪದ ಬೆನ್ನಲ್ಲೇ ರಾಜ್ಯ ಸರ್ಕಾರ ಮಲಪ್ಪುರಂ ಪೋಲೀಸರ ಮೇಲೆ ಹರಿಹಾಯ್ದಿದೆ.
ಪೋಲೀಸ್ ಸಭೆಯ ಸ್ಥಳದಲ್ಲಿ ಪಿವಿ ಅನ್ವರ್ ನಿಂದ ಅವಮಾನ ಮಾಡಿದ್ದ ಮಲಪ್ಪುರಂ ಎಸ್ ಪಿಎಸ್ ಶಶಿಧರನ್ ಅವರನ್ನು ಸರ್ಕಾರ ವರ್ಗಾವಣೆ ಮಾಡಿದೆ. ಭಾರೀ ವಿವಾದಕ್ಕೆ ಕಾರಣವಾಗಿದ್ದ ಮರ ಕಡಿಯುವ ಪ್ರಕರಣದ ತನಿಖಾಧಿಕಾರಿಯಾಗಿದ್ದ ತಾನೂರು ಡಿವೈಎಸ್ಪಿ ಬೆನ್ನಿ ಅವರನ್ನು ಸರ್ಕಾರ ವರ್ಗಾವಣೆ ಮಾಡಿದೆ. ಇದೇ ಸಂದರ್ಭದಲ್ಲಿ ಅನ್ವರ್ ಅಸಮಾಧಾನಕ್ಕೆ ಕಾರಣರಾದ ಅಧಿಕಾರಿಗಳು ವರ್ಗಾವಣೆಗೊಂಡಾಗಲೂ ಸರ್ಕಾರದ ರಕ್ಷಣೆಯಲ್ಲಿಯೇ ಗಂಭೀರ ಆರೋಪ ಎದುರಿಸುತ್ತಿರುವ ಎಡಿಜಿಪಿ ಎಂ.ಆರ್.ಅನಿಲ್ ಕುಮಾರ್ ವಿರುದ್ದ ಯಾವುದೇ ಕ್ರಮ ಕೈಗೊಂಡಿಲ್ಲ.
ಮಲಪ್ಪುರಂ ಪೋಲೀಸ್‍ನಲ್ಲಿ ಎಸ್‍ಪಿ ಮತ್ತು 16 ಡಿವೈಎಸ್‍ಪಿಗಳ ಸಾಮೂಹಿಕ ವರ್ಗಾವಣೆಯನ್ನು ಸರ್ಕಾರ ಮಾಡಿದೆ. ವರ್ಗಾವಣೆಗೊಂಡ ಉನ್ನತ ಅಧಿಕಾರಿಗಳು ಪಿ.ವಿ.ಅನ್ವರ್ ಅವರ ಅಸಮಾಧಾನಕ್ಕೆ ಬಲಿಯಾದವರು. ಎಸ್‍ಪಿಎಸ್ ಶಶಿಧರನ್ ಅವರನ್ನು ಎರ್ನಾಕುಲಂನ ವಿಜಿಲೆನ್ಸ್‍ಗೆ ವರ್ಗಾಯಿಸಲಾಗಿದೆ.
ಡಿವೈಎಸ್ಪಿ ಬೆನ್ನಿ ಅವರನ್ನು ಕೋಝಿಕ್ಕೋಡ್ ರೂರರ್ ಜಿಲ್ಲಾ ಅಪರಾಧ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ. ಮಲಪ್ಪುರಂನ ಡಿವೈಎಸ್ಪಿಗಳನ್ನೂ ವರ್ಗಾವಣೆ ಮಾಡಲಾಗಿದೆ. ಮಲಪ್ಪುರಂನ ವಿಶೇಷ ಶಾಖೆ ಸೇರಿದಂತೆ ಎಲ್ಲಾ ಉಪವಿಭಾಗಗಳ ಅಧಿಕಾರಿಗಳನ್ನು ಸಹ ವರ್ಗಾವಣೆ ಮಾಡಲಾಗಿದೆ. ಪೆÇಲೀಸ್ ಹೆಡ್ಕ್ವಾರ್ಟರ್ಸ್ ಎಐಜಿ ವಿಶ್ವನಾಥ್ ಅವರು ಮಲಪ್ಪುರಂ ನೂತನ ಎಸ್ಪಿಯಾಗಲಿದ್ದಾರೆ.
ಈ ಹಿಂದೆ ಕ್ಯಾಂಪ್ ಕಚೇರಿ ಎದುರು ಏಕಾಂಗಿಯಾಗಿ ಪ್ರತಿಭಟನೆ ನಡೆಸಿದರೂ ಕ್ರಮ ಕೈಗೊಳ್ಳದ ಸರ್ಕಾರ, ಇದೀಗ ಎಸ್ಪಿ ಸೇರಿದಂತೆ ಎಲ್ಲರನ್ನೂ ವರ್ಗಾವಣೆ ಮಾಡಲಾಗಿದೆ.
ಬಿನೋಯ್ ವಿಶ್ವ ಸೇರಿದಂತೆ ಅಜಿತ್ ಕುಮಾರ್ ವಿರುದ್ಧ ಸಾರ್ವಜನಿಕವಾಗಿ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ ಮುಖ್ಯಮಂತ್ರಿ ಕಡೆಯಿಂದ ಮಾತ್ರ ಮೌನವಿದೆ. ಎಡಿಜಿಪಿ ಮತ್ತು ಪಿ ಶಶಿ ವಿರುದ್ಧದ ದೂರುಗಳು ವರ್ಗಾವಣೆಗೊಂಡವರಿಗಿಂತ ಹೆಚ್ಚು ಗಂಭೀರವಾಗಿದೆ. ಆದರೆ ಮಲಪ್ಪುರಂ ಎಸ್ಪಿ ಹಾಗೂ ಇತರರನ್ನು ಸಾಮೂಹಿಕವಾಗಿ ವರ್ಗಾವಣೆ ಮಾಡುವ ಮೂಲಕ ಅನ್ವರ್ ಅವರನ್ನು ಸದ್ಯಕ್ಕೆ ತಣ್ಣಗಾಗಿಸುವುದೇ ಸರ್ಕಾರದ ಈ ಕ್ರಮದ ಹಿಂದಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ನಂತರ ಮಲಪ್ಪುರಂ ಪೆÇಲೀಸರ ವಿರುದ್ಧ ಲೈಂಗಿಕ ಆರೋಪ ಸೇರಿದಂತೆ ಸಮಸ್ಯೆಗಳು ಕೇಳಿಬಂದವು.