ಕೊಚ್ಚಿ: ಅತ್ಯಾಚಾರ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸುತ್ತಿದ್ದಂತೆ, ನಟ ಮತ್ತು 'ಅಮ್ಮಾ' ಸಂಘಟನೆಯ ಮಾಜಿ ಪ್ರಧಾನ ಕಾರ್ಯದರ್ಶಿ ಸಿದ್ದಿಕ್ ಅವರನ್ನು ಪೆÇಲೀಸರು ಬಂಧಿಸಲು ಪ್ರಕ್ರಿಯೆ ಪ್ರಾರಂಭಿಸಿದ್ದಾರೆ.
ವಿಶೇಷ ತನಿಖಾ ತಂಡದ ಅಧಿಕಾರಿಗಳನ್ನೂ ತಿರುವನಂತಪುರಂನಿಂದ ಕೊಚ್ಚಿಗೆ ಸ್ಥಳಾಂತರಿಸಲಾಗುವುದು.
ಸಿದ್ದಿಕ್ ಅನ್ಯ ದೇಶ-ರಾಜ್ಯಗಳಿಗೆ ತೆರಳದಂತೆ ವಿಮಾನ ನಿಲ್ದಾಣಗಳಲ್ಲಿ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದೆ. ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ಮೊದಲು ಸಿದ್ದಿಕ್ ಅವರನ್ನು ಬಂಧಿಸಲು ಪೆÇಲೀಸರು ನಿರ್ಧರಿಸಿದ್ದಾರೆ. ಆದರೆ ಸಿದ್ದಿಕ್ ಎಲ್ಲಿದ್ದಾರೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಅವರು ಕೊಚ್ಚಿಯಲ್ಲಿ ಮನೆಯಲ್ಲಿಲ್ಲ ಎಂದು ವರದಿಯಾಗಿದೆ. ಸಿದ್ದಿಕ್ ಪೋನ್ ಕೂಡ ಸ್ವಿಚ್ ಆಫ್ ಆಗಿದೆ.
ಆದೇಶದ ಪ್ರತಿ ಬಂದ ನಂತರ ಮೇಲ್ಮನವಿ ಸಲ್ಲಿಸುವ ಕುರಿತು ಚಿಂತನೆ ನಡೆಸುವುದಾಗಿ ಸಿದ್ದಿಕ್ ಪರ ವಕೀಲರು ತಿಳಿಸಿದ್ದಾರೆ. ಬಂಧನದ ಸಕ್ರಿಯ ಸಾಧ್ಯತೆಯೊಂದಿಗೆ ಪೋಲೀಸರು ಕಾಯುತ್ತಿದ್ದಾರೆ. ಸಿದ್ದಿಕ್ ಅವರ ವಕೀಲರು ರಾಮನಪಿಳ್ಳ ಅಸೋಸಿಯೇಟ್ಸ್ ಅವರಾಗಿರುವರು.
2016ರಲ್ಲಿ ತಿರುವನಂತಪುರಂನ ಮಸ್ಕತ್ ಹೋಟೆಲ್‍ನಲ್ಲಿ ಕಿರುಕುಳ ನೀಡಲಾಗಿತ್ತು ಎಂದು ಯುವ ನಟಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ. ತಾನು ನಿರಪರಾಧಿ ಮತ್ತು ತನ್ನ ವಿರುದ್ಧದ ಆರೋಪಗಳು ನಿರಾಧಾರ ಎಂದು ತಿಳಿಸಿದ ಸಿದ್ದಿಕ್ ಅವರ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು. ಇದೊಂದು ಗಂಭೀರ ಪ್ರಕರಣವಾಗಿದ್ದು, ದೂರಿನ ವಿಳಂಬವನ್ನು ಪರಿಗಣನೆಗೆ ತೆಗೆದುಕೊಳ್ಳಬಾರದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಹೀಗೆ ಹೇಳುವ ಮೂಲಕ ಸಂತ್ರಸ್ಥೆಯನ್ನು ಅವಹೇಳನ ಮಾಡಬಾರದು ಎಂದೂ ನ್ಯಾಯಾಲಯ ತಿಳಿಸಿದೆ.
ಜನವರಿ 27, 2016 ರಂದು ಸಿದ್ದಿಕ್ ತಿರುವನಂತಪುರಂನ ಮಸ್ಕತ್ ಹೋಟೆಲ್‍ಗೆ ಮಧ್ಯಾಹ್ನ 12 ಗಂಟೆಗೆ ತಲುಪಿದ್ದರು. 28ರ ಸಂಜೆ 5 ಗಂಟೆವರೆಗೆ ಸಿದ್ದಿಕ್ ಹೋಟೆಲ್ ನಲ್ಲಿದ್ದ ಬಗ್ಗೆ ಸಾಕ್ಷ್ಯಾಧಾರಗಳು ಸಿಕ್ಕಿವೆ. ಇದೇ ವೇಳೆ ನಟಿಯೂ ಹೋಟೆಲ್ ನಲ್ಲಿದ್ದ ಬಗ್ಗೆ ಸಾಕ್ಷ್ಯ ಲಭಿಸಿದೆ.