ಕಾಸರಗೋಡು: ರೋಟರಿ ಕ್ಲಬ್ ಕಾಸರಗೋಡು, ಐಎಂಎ, ಐಎಪಿ ಸಂಯುಕ್ತ ಆಶ್ರಯದಲ್ಲಿ ಸರ್ಕಾರಿ ಹೆಣ್ಮಕ್ಕಳ ವಿ.ಎಚ್.ಎಸ್ ಎಸ್ ಸಹಯೋಗದೊಂದಿಗೆ ಜಿ.ವಿ.ಎಚ್.ಎಸ್.ಎಸ್. ನೆಲ್ಲಿಕುಂಜೆ ಶಾಲೆಯಲ್ಲಿ ಪ್ಲಸ್ ಒನ್ ವಿದ್ಯಾರ್ಥಿಗಳಿಗೆ ಸಿಪಿರ್, ಪ್ರಥಮ ಶುಶ್ರೂಷೆ ಬಗ್ಗೆ ತರಗತಿ ನಡೆಸಲಾಯಿತು.
ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಜಾ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ರೋಟೇರಿಯನ್, ಹಿರಿಯ ಮಕ್ಕಳ ತಜ್ಞ ಡಾ.ಬಿ.ನಾರಾಯಣ ನಾಯ್ಕ್, ಸಿಪಿಆರ್ ಪ್ರಾಮುಖ್ಯತೆ ಮತ್ತು ಅದರ ಮೂಲಭೂತ ಅಂಶಗಳನ್ನು ವಿವರಿಸಿದರು. ಡಾ ಶಿಫಾರ್ ಫಸ್ಟ್ ಐಡ್(ಪ್ರಥಮ ಚಿಕಿತ್ಸೆ) ತರಗತಿ ನಡೆಸಿದರು.ರೋಟೇರಿಯನ್ ಹರೀಶ್ ಕುಮಾರ್ ಹಾಗೂ ಛಾಯಾಗ್ರಾಹಕ ಶ್ರೀಕಾಂತ್ ಸಹಕರಿಸಿದರು
ಸಿಪಿಆರ್, ಶ್ವಾಸ ನಿರ್ವಹಣೆ, ಫಿಟ್ಸ್ ನಿರ್ವಹಣೆ ಮತ್ತು ಗಂಟಲಲ್ಲಿ ಸಿಲುಕಿದ ವಸ್ತುವನ್ನು ತೆಗೆದುಹಾಕಲು ಹೈಮ್ಲಿಚ್ ಕುಶಲತೆಯ ಬಗ್ಗೆ ತರಬೇತಿ ನೀಡಲಾಯಿತು. ಶಿಕ್ಷಕರು ಸೇರಿದಂತೆ 60 ಮಂದಿ ಭಾಗವಹಿಸಿದ್ದರು.