ಕಾಸರಗೋಡು: ಜಿಲ್ಲಾ ವಾರ್ತಾ ಮತ್ತು ಮಾಹಿತಿ ಕಛೇರಿ ಹಗೂ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಕಾರದೊಂದಿಗೆ ಪತ್ರಕರ್ತರಿಗಾಗಿ'ಪೆÇೀಕ್ಸೋ ಕಾಯ್ದೆ-2012' ಬಗ್ಗೆ ಮಾಹಿತಿ ಕಾರ್ಯಾಗಾರ ವಾರ್ತಾ ಮತ್ತು ಮಾಹಿತಿ ಕಛೇರಿ ಪಿಆರ್ ಚೇಂಬರ್‍ನಲ್ಲಿ ಜರುಗಿತು.
ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ(ಎಡಿಎಂ) ಪಿ. ಅಖಿಲ ಉದ್ಘಾಟಿಸಿ ಮಾತನಾಡಿ, ಮಕ್ಕಳ ಘನತೆ ಕಾಪಾಡಲು ಮತ್ತು ಲೈಂಗಿಕ ದೌರ್ಜನ್ಯ ತಡೆಗಟ್ಟಲು 2012ರಲ್ಲಿ ರೂಪುಗೊಂಡಿರುವ ಪೋಕ್ಸೋ ಕಾಯ್ದೆಯ ಪರಿಣಾಮಕಾರಿ ಜಾರಿಯಲ್ಲಿ ಮಾಧ್ಯಮಗಳ ಪಾತ್ರ ಮಹತ್ತರವಾದುದು. ಜಿಲ್ಲೆಯಲ್ಲಿ ಪೆÇೀಕ್ಸೊ ಕಾಯ್ದೆಯ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಲಾಗುತ್ತಿದ್ದು, ಶಾಲೆಗಳಲ್ಲಿ ನಿರಂತರವಾಗಿ ದೂರುಗಳು ಆಡಳಿತಕ್ಕೆ ಬರುತ್ತಿವೆ. ಇದು ಮಕ್ಕಳಲ್ಲೂ ಜಾಗೃತಿಗೆ ಕಾರಣವಾಗಿದೆ. ಅದೇ ರೀತಿ ಜನಸಾಮಾನ್ಯರಿಗೂ ಈ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕಾಗಿದ್ದು, ಪತ್ರಕರ್ತರ ಸಹಕಾರ ಅಗತ್ಯ ಎಂದು ತಿಳಿಸಿದರು.
ಜಿಲ್ಲಾ ಶಿಶು ಅಭಿವೃದ್ಧಿ ಅಧಿಕಾರಿ ಎಲ್. ಶೀಬಾ ಅಧ್ಯಕ್ಷತೆ ವಹಿಸಿದ್ದರು. ವಕೀಲ ವಿನಯ್ ಮಂಗಾಟ್ ಸಂಪನ್ಮುಲ ವ್ಯಕ್ತಿಯಾಗಿ ಭಾಗವಹಿಸಿ, ಪೋಕ್ಸೋ ಕಾಯ್ದೆ, ಪೋಕ್ಸೋ ಸಂತ್ರಸ್ತರ ಬಗ್ಗೆ ಗೌಪ್ಯತೆ ಕಾಪಾಡುವ ಬಗ್ಗೆ ತರಗತಿ ನಡೆಸಿದರು. ಪೆÇೀಕ್ಸೊ ಕಾಯ್ದೆಯ ಸಂಬಂಧಿತ ಭಾಗಗಳು ಮತ್ತು ಸಮಾಜದಲ್ಲಿ ಕಾಯ್ದೆಯ ಮಹತ್ವವನ್ನು ವಿವರಿಸಿದರು. ಪೋಕ್ಸೋ ಸಂತ್ರಸ್ತ ಮಕ್ಕಳಿಗೆ ಸಂಬಂಧಿಸಿದ ಸುದ್ದಿಗಳನ್ನು ವರದಿ ಮಾಡುವಾಗ ಗಮನಿಸಬೇಕಾದ ವಿಷಯಗಳ ಕುರಿತು ಚರ್ಚಿಸಲಾಯಿತು. ವಿವಿಧ ಮಾಧ್ಯಮ ಪ್ರತಿನಿಧಿಗಳು ಚರ್ಚೆಯಲ್ಲಿ ಭಾಗವಹಿಸಿದ್ದರು. ಕಾಸರಗೋಡು ಪ್ರೆಸ್ ಕ್ಲಬ್ ಕಾರ್ಯದರ್ಶಿ ಕೆ.ವಿ.ಪದ್ಮೇಶ್ ಉಪಸ್ಥಿತರಿದ್ದರು. ಜಿಲ್ಲಾ ವಾರ್ತಾಧಿಕಾರಿ ಎಂ.ಮಧುಸೂದನನ್ ಸ್ವಾಗತಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಲೆಕ್ಕ ಪರಿಶೋಧಕಿ ಅಮಲಾ ಮ್ಯಾಥ್ಯೂ ವಂದಿಸಿದರು.