ಕಾಸರಗೋಡು : ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ಜಿಲ್ಲಾ ಪಂಚಾಯಿತಿ, ಜಲ ಭದ್ರತೆ ಮತ್ತು ಹವಾಮಾನ ಹೊಂದಾಣಿಕೆ, 'ವಾಸ್ಕಾ' ಯೋಜನೆ ತಾಂತ್ರಿಕ ನೆರವಿನೊಂದಿಗೆ 'ಹಸಿರು ಮತ್ತು ಸ್ವಚ್ಛ ಸಿವಿಲ್ ಸ್ಟೇಷನ್' ಕರ್ಯಕ್ರಮದನ್ವಯ ಸಹಯೋಗದಲ್ಲಿ ವಿದ್ಯಾನಗರ ಕಲೆಕ್ಟರೇಟ್ ಕಾಂಪೌಂಡ್‍ನ ಒಂದು ಎಕರೆ ವಿಸ್ತೀರ್ಣದಲ್ಲಿ ಮದರಿ ವನ ನಿರ್ಮಾಣಕ್ಕೆ ಚಾಲನೆ ನೀಡಲಯಿತು.
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಿಯಾವಾಕಿ ಮಾದರಿ ವನ ಮತ್ತು ಹಣ್ಣಿನ ತೋಟದ ನಿರ್ಮಾಣದ ಉದ್ಘಾಟನೆಯನ್ನು ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ನಿರ್ವಹಿಸಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಚೆಂಗಳ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸಫಿಯಾ ಹಾಶಿಮ್ ಸಸಿಗಳನ್ನು ನೆಡುವ ಮೂಲಕ ಯೋಜನೆಗೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಚೆಂಗಳ ಗ್ರಾಮ ಪಂಚಾಯಿತಿ ಸದಸ್ಯೆ ಪಿ. ಖದೀಜಾ, ಜಂಟಿ ನಿರ್ದೇಶಕರ ಕಚೇರಿ ಹಿರಿಯ ಅಧೀಕ್ಷಕ ಪೌಲ್ಸನ್ ಡೇವಿಡ್, ಚೆಂಗಳ ಗ್ರಾಮ ಪಂಚಾಯಿತಿ ನರೆಗಾ ಅಧಿಕಾರಿಗಳು, ಜಿಲ್ಲಾ ಮಟ್ಟದ ನರೆಗಾ ಅಧಿಕಾರಿಗಳು, ಕೃಷಿ ಅಭಿಯಂತರರು, ಕಾಸರಗೋಡು ಜಿಲ್ಲಾ ಕೋರ್ಡಿನೇಟರ್, ನರೆಗಾ ಚೆಂಗಳ ಪಂಚಾಯಿತಿ ಸಮಿತಿ ಉಪಸ್ಥಿತರಿದ್ದರು.