HEALTH TIPS

ಆತಿಶಿ ಸಂಪುಟ | ನಾಲ್ವರು ಸಚಿವರು ಮುಂದುವರಿಕೆ; ದಲಿತ ನಾಯಕ ಹೊಸ ಸೇರ್ಪಡೆ

 ವದೆಹಲಿ: ನಿರ್ಗಮಿತ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸಂಪುಟದಲ್ಲಿದ್ದ ನಾಲ್ಕೂ ಸಚಿವರು ನೂತನ ಸಿಎಂ ಆತಿಶಿ ಅವರ ಕ್ಯಾಬಿನೆಟ್‌ನಲ್ಲೂ ಮುಂದುವರಿಯಲಿದ್ದಾರೆ. ಅವರೊಟ್ಟಿಗೆ ದಲಿತ ಶಾಸಕ ಮುಖೇಶ್‌ ಅಹ್ಲಾವತ್‌ ಹೊಸದಾಗಿ ಸಂಪುಟ ಸೇರಲಿದ್ದಾರೆ.

ಕೇಜ್ರಿವಾಲ್‌ ಸಂಪುಟದಲ್ಲಿದ್ದ ಗೋಪಾಲ್‌ ರಾಯ್‌, ಕೈಲಾಶ್‌ ಗೆಹ್ಲೋತ್‌, ಸೌರಭ್‌ ಭಾರದ್ವಾಜ್‌ ಮತ್ತು ಇಮ್ರಾನ್‌ ಹುಸ್ಸೇನ್‌ ಅವರು ಸ್ಥಾನದಲ್ಲಿ ಮುಂದುವರಿಯಲಿದ್ದು, ಆತಿಶಿ ಅವರೊಂದಿಗೆ ಶನಿವಾರ (ಸೆ.21) ಮತ್ತೊಮ್ಮೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ದೆಹಲಿ ಕ್ಯಾಬಿನೆಟ್‌ನಲ್ಲಿ ಮುಖ್ಯಮಂತ್ರಿ ಸೇರಿದಂತೆ ಗರಿಷ್ಠ 7 ಸಚಿವರಿಗೆ ಅವಕಾಶವಿದೆ. ಈ ಬಾರಿ ಹೊಸದಾಗಿ ಮುಖೇಶ್‌ ಸೇರ್ಪಡೆಯಾಗುತ್ತಿರುವುದರಿಂದ ಇನ್ನೊಂದು ಸ್ಥಾನವಷ್ಟೇ ಬಾಕಿ ಉಳಿಯಲಿದೆ.

ಮುಖೇಶ್‌ ಅವರು ಎಸ್‌ಸಿ ಮೀಸಲು ಕ್ಷೇತ್ರವಾದ ಸುಲ್ತಾನ್‌ಪುರ ಮಜ್ರಾದಿಂದ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದಾರೆ. ಮುಖ್ಯಮಂತ್ರಿ ಆತಿಶಿ ಅವರು ಪಂಜಾಬಿ ರಜಪೂತ್‌ ಸಮುದಾಯಕ್ಕೆ ಸೇರಿದವರು. ಉಳಿದಂತೆ ರಾಯ್‌ ಅವರು ಠಾಕೂರ್‌, ಗೆಹ್ಲೋತ್‌ ಅವರು ಜಾಟ್‌, ಭಾರದ್ವಾಜ್‌ ಅವರು ಬ್ರಾಹ್ಮಣ ಮತ್ತು ಇಮ್ರಾನ್‌ ಅವರು ಮುಸ್ಲಿಂ ಸಮುದಾಯದವರು.

'ತ‍ಪ್ಪು ಸಂದೇಶ ರವಾನೆಯಾಗಲಿದೆ' ಎಂಬ ಕಾರಣಕ್ಕೆ ಹಿರಿಯ ಸಚಿವರನ್ನು ಬದಲಿಸದಿರಲು ಪಕ್ಷದ ನಾಯಕರು ನಿರ್ಧರಿಸಿದ್ದಾರೆ ಎಂದೂ ಮೂಲಗಳು ಹೇಳಿವೆ.

ಹಾಗೆಯೇ, 2025ರ ಆರಂಭದಲ್ಲಿ ದೆಹಲಿ ವಿಧಾನಸಭೆಗೆ ಚುನಾವಣೆ ನಡೆಯಲಿರುವುದರಿಂದ ಅನುಭವಿಗಳು, ಹೊಸಬರು ಸೇರಿದಂತೆ ಸಮತೋಲನದಿಂದ ಕೂಡಿದ ಕ್ಯಾಬಿನೆಟ್‌ ಇರಬೇಕೆಂಬುದು ಪಕ್ಷದ ಆಶಯವಾಗಿದೆ ಎಂದೂ ಹೇಳಲಾಗಿದೆ.

ಸರ್ಕಾರ ಸದ್ಯ ಹಿಂಪಡೆದಿರುವ 'ಅಬಕಾರಿ ನೀತಿ' ಜಾರಿ ವೇಳೆ ನಡೆದಿದೆ ಎನ್ನಲಾದ ಹಣದ ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ ಕೇಂದ್ರೀಯ ತನಿಖಾ ದಳವು (ಸಿಬಿಐ) ಕೇಜ್ರಿವಾಲ್‌ ಅವರನ್ನು ಬಂಧಿಸಿತ್ತು. ಕಳೆದ ವಾರ ಜಾಮೀನು ಪಡೆದಿರುವ ಅವರು, ಜನರು ತಮಗೆ ಮತ್ತೊಮ್ಮೆ ಅಧಿಕಾರ ನೀಡುವವರೆಗೆ ಸಿಎಂ ಸ್ಥಾನದಿಂದ ಕೆಳಗಿಳಿಯುವುದಾಗಿ ಘೋಷಿಸಿ ರಾಜೀನಾಮೆ ನೀಡಿದ್ದರು.

ಬಳಿಕ ನಡೆದ ಎಎಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ತಮ್ಮ ಉತ್ತರಾಧಿಕಾರಿಯಾಗಿ ಆತಿಶಿ ಅವರ ಹೆಸರನ್ನು ಕೇಜ್ರಿವಾಲ್‌ ಘೋಷಿಸಿದ್ದರು. ನಿರ್ಗಮಿತ ಸಿಎಂ ನಿರ್ಧಾರವನ್ನು ಎಎಪಿಯು ಸರ್ವಾನುಮತದಿಂದ ಅಂಗೀಕರಿಸಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries