ಮಂಜೇಶ್ವರ: ಬ್ರಹ್ಮಶ್ರೀ ನಾರಾಯಣಗುರು ಯುವ ವೇದಿಕೆ (ರಿ )ಕಾಸರಗೋಡು ಜಿಲ್ಲಾ ಸಮಿತಿ ಮಂಜೇಶ್ವರ ಇದರ ವಾರ್ಷಿಕ ಸಭೆ ಹೊಸಂಗಡಿ ಫ್ಲೆಕ್ಸ್ ಪಾಯಿಂಟ್ ಸಭಾಂಗಣದಲ್ಲಿ ನಡೆಯಿತು. ವೇದಿಕೆಯ ಜಿಲ್ಲಾಧ್ಯಕ್ಷ ಶ್ರೀಕೃಷ್ಣ ಶಿವಕೃಪಾ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯ 16ನೇ ವರ್ಷದ ವಾರ್ಷಿಕೋತ್ಸವವನ್ನು ಹೊಸಂಗಡಿ ಪ್ರೇರಣಾ ಹಾಲ್‍ನಲ್ಲಿ ಅಕ್ಟೋಬರ್ 10ರಂದು ನಡೆಸಲು ತೀರ್ಮಾನಿಸಲಾಯಿತು.
ಈ ಸಂದರ್ಭ ಎಸ್ಸೆಸೆಲ್ಸಿಯಲ್ಲಿ ಅತ್ಯಧಿಕ ಅಂಕ ಪಡೆದ ಸಮಾಜದ ವಿದ್ಯಾರ್ಥಿಗೆ ಬಂಗಾರದ ಪದಕ (ಗುರು ಶ್ರೀ ಪದಕ), ದ್ವಿತೀಯ ಹಾಗೂ ತೃತೀಯ ಬಹುಮಾನವಾಗಿ ಬೆಳ್ಳಿಯ ಪದಕ ನೀಡಲಾಗುವುದು. ಪ್ಲಸ್‍ಟು ಅಥವಾ ದ್ವಿತೀಯ ಪಿಯುಸಿಯಲ್ಲಿ ಪ್ರತಿ ಸಮಿತಿಯಿಂದ ಮೂರು ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುವುದು.
ಸಮಾಜದಲ್ಲಿ ವಿಶೇಷ ಸೇವೆಗೈದ ಒಬ್ಬ ಸಮಾಜ ಸೇವಕರಿಗೆ ಗುರು ಶ್ರೀ ಪ್ರಶಸ್ತಿ ಪ್ರದಾನ, ಆದಿನ ಬೆಳಗ್ಗೆ 9ಕ್ಕೆ ಮಹಿಳೆಯರಿಗೆ ಮಕ್ಕಳಿಗೆ ಹಾಗೂ ಯುವಕರಿಗಾಗಿ ವಿವಿಧ ಆಟೋಟ ಸ್ಪರ್ಧೆಗಳನ್ನು ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಸಭೆಯಲ್ಲಿ ವೇದಿಕೆಯ ಉಪಾಧ್ಯಕ್ಷ ಕೃಷ್ಣಪ್ಪ ಪೂಜಾರಿ ಬಡಾಜೆ, ವೇದಿಕೆ ಕಾರ್ಯದರ್ಶಿ ಹರೀಶ್ ಸುವರ್ಣ, ಕೋಶಾಧಿಕಾರಿ ರವೀಂದ್ರ ಪೂಜಾರಿ ಭಂಡಾರ ಮನೆ, ಪ್ರಧಾನ ಸಂಚಾಲಕ ರವಿ ಮುಡಿಮಾರ್, ಸಹ ಸಂಚಾಲಕ ಅಶ್ವಿನ್ ಕಲ್ಲಗದ್ದೆ ಉಪಸ್ಥಿತರಿದ್ದರು.