ತಿರುವನಂತಪುರ: ಇಂದಿನಿಂದ ರಾಜ್ಯದಲ್ಲಿ ಓಣಂಕಿಟ್ ವಿತರಣೆ ಆ|ರಂಭಗೊಂಡಿದೆ. ಹಳದಿ ಪಡಿತರ ಚೀಟಿದಾರರಿಗೆ ಓಣಂಕಿಟ್ ನೀಡಲಾಗುವುದು ಮತ್ತು ವಯನಾಡ್ ದುರಂತ ಪೀಡಿತ ಪ್ರದೇಶಗಳಲ್ಲಿನ ಎಲ್ಲಾ ಜನರಿಗೆ ಓಣಂಕಿಟ್ ನೀಡಲಾಗುವುದು. ಪಡಿತರ ಅಂಗಡಿಗಳ ಮೂಲಕ ಓಣಂಕಿಟ್ ವಿತರಿಸಲಾಗುತ್ತದೆ.
ಏತನ್ಮಧ್ಯೆ, ಕಿಟ್ ನಲ್ಲಿ 14 ವಸ್ತುಗಳು ಒಳಗೊಂಡಿದ್ದು, ಕಲ್ಯಾಣ ಸಂಸ್ಥೆಗಳ ಜನರಿಗೆ ನೇರವಾಗಿ ತಲುಪಿಸಲಾಗುವುದು. ಕಿಟ್ ನಲ್ಲಿ ಕಡಲೆ,ಶ್ಯಾವಿಗೆ ಪಾಯಸ ಮಿಕ್ಸ್, ಮಿಲ್ಮಾ ತುಪ್ಪ, ಗೋಡಂಬಿ, ತೆಂಗಿನ ಎಣ್ಣೆ, ಸಾಂಬಾರ್ ಪುಡಿ, ಮೆಣಸಿನ ಪುಡಿ, ಅರಿಶಿನ ಪುಡಿ, ಕೊತ್ತಂಬರಿ ಪುಡಿ, ಟೀ ಪುಡಿ, ತೊಗರಿ ಬೇಳೆ, ಸಣ್ಣ ಹೆಸರುಗಳನ್ನೊಳಗೊಂಡು ಬಟ್ಟೆ ಚೀಲದಲ್ಲಿ ನೀಡಲಾಗುತ್ತದೆ.