ಮಂಜೇಶ್ವರ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಮಂಗಳೂರು ಕರ್ನಾಟಕ ಇದರ ವತಿಯಿಂದ ತೀಯಾ ಸಮಾಜ ಭವನ ಉದ್ಯಾವರ ಮಾಡದಲ್ಲಿ 48ದಿನಗಳ ಯೋಗ ಶಿಕ್ಷಣವನ್ನು ತೀಯಾ ಸಮಾಜ ಭವನ ಅಧ್ಯಕ್ಷ ನೀಲಯ್ಯ ಪೂಮನ್ ಅವರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಶೋಭಾ ವಿಸ್ವಾನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಯಾಗಿ ಶಿಕ್ಷಣ ಹಾಗೂ ಚಿಂತನ ಪ್ರಮುಖರಾದ ಸಂದ್ಯೋಜಾತಾ ಭಾಗವಹಿಸಿದ್ದರು. ಗಣೇಶ್ ಪಾವೂರು, ವಿಶ್ವನಾಥ ಶೆಟ್ಟಿ ಕುಂಜತ್ತೂರು, ಯಶೋದಾ ಕುಂಜತ್ತೂರು, ಶಿಲ್ಪಾ ಕುಂಜತ್ತೂರು ಮೊದಲಾದವರು ಕುಂಜತ್ತೂರು ಯೋಗ ಶಾಖೆಯಲ್ಲಿ ಆರು ತಿಂಗಳು ಕಲಿತು ತಮಗೆ ಆದ ಅನುಭವವನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ನೇತ್ರವತಿ ವಲಯ ಸಯೋಜಕ ಜಯರಾಮ ಉಳ್ಳಾಲ, ಪ್ರತಾಪ್ ಉಳ್ಳಾಲ, ಶಿಕ್ಷಕ ಶೈಲೇಶ್ ಬಡಾಜೆ, ಉದ್ಯಾವರ ಮಾಡ ಅರಸು ಮಂಜುಷ್ಣಾರ್ ದೈವದ ತಮ್ಮ ಪಾತ್ರಿ ಹಾಗೂ ಮುಂಡಾಂತಾಯ ಪಾತ್ರಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸುನಿಲ್ ಕುಂಜತ್ತೂರು, ವಿಶಾಲಕ್ಷಿ ಕುಂಜತ್ತೂರು, ಮೋಹನ್ ಕುಂಜತ್ತೂರು, ರಂಜನಿ ಕುಂಜತ್ತೂರು, ಸುರೇಶ್ ಕುಂಜತ್ತೂರು, ಕಿರಣ್ ಕುಂಜತ್ತೂರು, ಹೇಮಂತ್ ಕುಂಜತ್ತೂರು, ನಿರಂಜನ್ ಕುಂಜತ್ತೂರು, ಮಾಧವ ಬಡಾಜೆ, ಕುಂಜತ್ತೂರು ಶಾಖೆ ಸಂಚಾಲಕ ಹೇಮಂತ್ ಹೊಸಂಗಡಿ, ಸ್ವಾತಿ ಸುಪ್ರಿತಾ, ವಿದ್ಯಾ ಮತ್ತಿತರು ಭಾಗವಹಿಸಿದ್ದರು. ಅಶ್ವಿತಾ ಹೇಮಂತ್ ಕುಂಡಿಲ ಸ್ವಾಗತಿಸಿ, ಗಣೇಶ್ ಕುಂಜತ್ತೂರು ವಂದಿಸಿದರು. ಅನುರಾಧ ಕುಂಜತ್ತೂರು ನಿರೂಪಿಸಿದರು.