ಕಾಸರಗೋಡು : ಇಂಡಿಯನ್ ಮೆಡಿಕಲ್ ಅಸೋಸಿಯೇಶನ್(ಐಎಂಎ) ಕಾಸರಗೋಡು ಶಾಖೆ ಮತ್ತು ಐಎಂಎ ಮಹಿಳಾ ವಿಭಾಗ ವತಿಯಿಂದ ಓಣಂ ಸಮಾರಂಭವನ್ನು ಕಾಸರಗೋಡಿನಲ್ಲಿ ಆಚರಿಸಲಾಯಿತು.
ಐಎಂಎ ಕಾಸರಗೋಡು ಹಾಗೂ ಐಎಂಎ ಮಹಿಳಾ ಘಟಕ ವತಿಯಿಂದ ಜಂಟಿಯಾಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಐಎಂಎ ಕಾಸರಗೋಡು ಜಿಲ್ಲಾ ಸಂಚಾಲಕ ಡಾ.ಬಿ.ನಾರಾಯಣ ನಾಯ್ಕ್ ಸಮಾರಂಭ ಉದ್ಘಾಟಿಸಿದರು. ಕಾರ್ಯಕ್ರಮದ ಅಂಗವಾಗಿ ಐಎಂಎ ಸದಸ್ಯರಿಗೆ ಹಾಗೂ ಕುಟುಂಬದವರಿಗಾಗಿ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿತ್ತು. ಹೂವಿನ ರಂಗೋಲಿ, ತಿರುವಾದಿರ ಸೇರಿದಂತೆ ಕಾರ್ಯಕ್ರಮ ವೈವಿಧ್ಯ ನಡೆಯಿತು. ಕಾರ್ಯಕ್ರಮದ ಅಂಗವಾಗಿ ಓಣಂ ಔತಣ ಕೂಟ ಆಯೋಜಿಸಲಾಗಿತ್ತು. ಹಿರಿಯ, ಕಿರಿಯ ವೈದ್ಯರು ಹಾಗೂ ಪರಿವಾರದವರು ಓಣಂ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.