ಕೋಝಿಕ್ಕೋಡ್: ಅತ್ಯುತ್ತಮ ಸೇವಾ ಕಾರ್ಯಕರ್ತರಿಗಾಗಿ ಬಿಜೆಪಿ ಸಂಘಟನೆಯ ಮಾಜಿ ಪ್ರಧಾನ ಕಾರ್ಯದರ್ಶಿ ಪಿ.ಪಿ. ಮುಕುಂದನ್ ಹೆಸರಿನ ಪ್ರಥಮ ಸೇವಾ ಪ್ರಶಸ್ತಿ ಕೇಂದ್ರ ಸಚಿವ ಸುರೇಶ್ ಗೋಪಿಗೆ ಘೋಷಿಸಲಾಗಿದೆ.
ಪಿ.ಪಿ. ಮುಕುಂದನ್ ಅವರ ನೆನಪುಗಳಿಗೆ ಶ್ರದ್ಧಾಂಜಲಿ ಅರ್ಪಿಸಲು ಕೋಝಿಕ್ಕೋಡ್ ನಲ್ಲಿ ನಡೆದ ವಂದೇಮುಕುಂದಂ ಕಾರ್ಯಕ್ರಮದಲ್ಲಿ ಗೋವಾ ರಾಜ್ಯಪಾಲ ಪಿ. ಶ್ರೀಧರನ್ ಪಿಳ್ಳೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಪ್ರಶಸ್ತಿಯು 25,000 ರೂ.ನಗದು ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. 13ರಂದು ಬೆಳಗ್ಗೆ 11 ಗಂಟೆಗೆ ಕಲ್ಲೈ ರಸ್ತೆಯಲ್ಲಿರುವ ಸ್ನೇಹಾಂಜಲಿ ಸಭಾಂಗಣದಲ್ಲಿ ಸಮಾರಂಭ ನಡೆಯಲಿದೆ. ಸುರೇಶ್ ಗೋಪಿ ಅವರು ರಾಜಕೀಯೇತರವಾಗಿ ಸಮಾಜಸೇವಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಕಾರಣ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಪಿ.ಪಿ. ಮುಕುಂದನ್ ಸ್ಮಾರಕ ಸಮಿತಿ ಸಂಚಾಲಕ ಅಡ್ವ. ಕೆ.ವಿ ಸುಧೀರ್, ಪ್ರೊ. ಸುಮತಿ ಹರಿದಾಸ್, ಟಿ. ಅನೂಪ್ ಕುಮಾರ್, ಪಿ. ಉಣ್ಣಿಕೃμÀ್ಣನ್ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು.