ಪೆರ್ಲ : ಬೆದ್ರಂಪಳ್ಳ ದೇಶಾಭಿಮಾನಿ ಸಾರ್ವಜನಿಕ ಗ್ರಂಥಾಲಯದಲ್ಲಿ ಓಣಂ ಆಚರಣೆಯನ್ನು ನಡೆಸಲಾಯಿತು. ಕಾರ್ಯಕ್ರಮವನ್ನು ಕವಯಿತ್ರಿ, ಲೇಖಕಿ ವನಜಾಕ್ಷಿ ಪಿ. ಚಂಬ್ರಕಾನ ಉದ್ಘಾಟಿಸಿ "ತನ್ನ ಪ್ರಜೆಗಳನ್ನು ಪ್ರೀತಿಯಿಂದ ಕಾಣಲು ನಾಡಿಗೆ ಬರುವ ಮಹಾಬಲಿಯ ಪ್ರತೀತಿ ಸಾರುವ ಓಣಂ ಹಬ್ಬ ಆಚರಣೆ ಜಾತಿ ಮತ ಸೌಹರ್ದತೆಯೊಂದಿಗೆ ಎಲ್ಲರೂ ಒಟ್ಟಾಗಿ ಪರಸ್ಪರ ಮಾನವತ್ವದ ಸಂದೇಶ ಸಾರಲು ಸಾಕ್ಷಿಯಾಗಿದೆ ಎಂದರು.
ಗ್ರಂಥಾಲಯದ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಮಾಸ್ತರ್ ಸಭೆಯ ಅಧ್ಯಕ್ಷತೆವಹಿಸಿದ್ದರು. ಉದ್ಯಮಿ,ಸಾಮಾಜಿಕ ಮುಂದಾಳು ಆಶ್ರಫ್ ಬೆದ್ರಂಪಳ್ಳ ಮುಖ್ಯ ಅತಿಥಿಗಳಾಗಿದ್ದರು. ಗಂಗಾಧರ ನಾಯ್ಕ್ ಬಲ್ತಕಲ್ಲು, ರಾಜೇಶ್, ರವಿಚಂದ್ರ, ನವೀತಾ ಮೊದಲಾದವರು ಉಪಸ್ಥಿತರಿದ್ದರು.ಗ್ರಂಥಪಾಲಕಿ ಚಿತ್ರಕಲಾ ಸ್ವಾಗತಿಸಿದರು.