HEALTH TIPS

ಹಣ ನಷ್ಟಗೊಂಡ ದ್ವೇಷದಲ್ಲಿ ಮಧ್ಯವರ್ತಿಗಳಿಬ್ಬರ ಅಪಹರಿಸಿ ಹಲ್ಲೆ- ಆರು ಮಂದಿಯ ಬಂಧನ

                 ಕಾಸರಗೋಡು: ಏಳು ಲಕ್ಷ ರೂ. ಹಣ ನಷ್ಟಗೊಂಡ ದ್ವೇಷದಿಂದ ತಂಡವೊಂದು ಚಿನ್ನಸಾಗಾಟದ ಮಧ್ಯವರ್ತಿಗಳನ್ನು ಅಪಹರಿಸಿ, ಅಜ್ಞಾತ ಸ್ಥಳದಲ್ಲಿ ಕೂಡಿಹಾಕಿ ಹಲ್ಲೆಗೈದ ಪ್ರಕರಣಕ್ಕೆ ಸಂಬಂಧಿಸಿ  ಆರು ಮಂದಿಯನ್ನು ಬೇಕಲ ಠಾಣೆ ಪೊಲೀಸರು ಬಂಧಿಸಿದ್ದಾರೆ.   

                  ಪಾಲಕ್ಕಾಡಿನ ಅಜಯ್ ಕುಮಾರ್, ಪನಯಾಲ್ ನಿವಾಸಿ ಸಲ್ಮಾನ್ ಫಾರಿಸ್, ಸಿ.ಎಚ್ ಮಹಮ್ಮದ್ ರಶೀದ್, ನೆಲ್ಲಿಕಟ್ಟೆ ನಿವಾಸಿಗಳಾದ ಶಂಸತ್ತುಲ್ ಕರಾರ್, ಎ.ಎಚ್ ಮಾಜಿದ್, ಎಂ. ಮಹಮ್ಮದ್ ಅಶ್ರಫ್ ಬಂಧಿತರು.  ಇನ್ನೊಬ್ಬ ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇವರು ಅಪಹರಿಸಿ ಕೂಡಿಹಾಕಿದ್ದ  ನೀಲೇಶ್ವರ ನಿವಾಸಿ ಶರೀಫ್ ಇಡಕ್ಕಾವಿಲ್ ಹಾಗೂ  ಕೋಟ್ಟಾಯಂ ಕಾಞÂರಪಳ್ಳಿ ನಿವಾಸಿ ಟಿ.ಎಂ ಸಜಿ ಎಂಬವರನ್ನು ಪೊಲೀಸರು ರಕ್ಷಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

                  ಹಳೇ ಚಿನ್ನ ವ್ಯಾಪಾರಕ್ಕಾಗಿ ಮಧ್ಯವರ್ತಿಗಳಾದ ನೀಲೇಶ್ವರದ ಶೆರೀಫ್ ಹಾಗೂ ಟಿ.ಎಂ ಸಜಿ ಬೆಳಗಾವಿಗೆ ತೆರಳಿದ್ದರು. ಇದೇ ಸಂದರ್ಭ ಕೇರಳದಿಂದ ಬೆಳಗಾವಿಗೆ ತೆರಳಿದ್ದ ತಂಡವೊಂದರ ಏಳು ಲಕ್ಷ ರೂ. ನಗದನ್ನು ಬೆಳಗಾವಿಯ ತಂಡವೊಂದು ದೋಚಿದೆ. ಈ ದ್ವೇಷದಲ್ಲಿ ಚಿನ್ನ ವ್ಯಾಪಾರಿ ಮಧ್ಯವರ್ತಿಗಳನ್ನು  ಹಣ ನಷ್ಟಗೊಂಡ ತಂಡ ಕಾರಿನಲ್ಲಿ ಅಪಹರಿಸಿ ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯ ಪೆರಿಯಾಟಡ್ಕದ ಕಟ್ಟಡವೊಂದರಲ್ಲಿ ಕೂಡಿಹಾಕಿ ಮಾರಕಾಯುಧಗಳಿಂದ ಹಲ್ಲೆ ನಡೆಸಿದೆ. ಹಣ ದರೋಡೆ ನಡೆಸಿದ ಬೆಳಗಾವಿಯ ತಂಡದೊಂದಿಗೆ ತಮಗೆ ಸಂಪರ್ಕವಿರುವುದಾಗಿ ಸಂಶಯ ಹೊಂದಿದ್ದ ಆರೋಪಿಗಳ ತಂಡ, ತಮ್ಮ ಹಣ ಮರಳಿ ಲಭಿಸುವಂತೆ ಮಾಡದಿದ್ದಲ್ಲಿ ಕೊಲೆಗೈಯುವುದಾಗಿ ಬೆದರಿಕೆಯೊಡ್ಡಿರುವುದಾಗಿಯೂ ಪಾರಾಗಿ ಬಂದವರು ಪೊಲೀಸರಲ್ಲಿ ತಿಳಿಸಿದ್ದಾರೆ. ಅಪಹರಣಕಾರರಿಂದ ಹಲ್ಲೆಗೊಳಗಾದವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಎಸ್.ಐ  ಬಾವ ಅಕ್ಕರಕ್ಕಾರನ್ ನೇತೃತ್ವದ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries