HEALTH TIPS

ಪಿಟಿ ಉಷಾ ವಿರುದ್ಧ ನಿರಂಕುಶ ಆಡಳಿತದ ಆರೋಪ; ಭಾರತೀಯ ಒಲಿಂಪಿಕ್ಸ್​ ಸಂಸ್ಥೆ ಸದಸ್ಯರ ಬಂಡಾಯ!

Top Post Ad

Click to join Samarasasudhi Official Whatsapp Group

Qries

             ವದೆಹಲಿ: ಭಾರತೀಯ ಒಲಿಂಪಿಕ್ಸ್​ ಸಂಸ್ಥೆ (ಐಒಎ) ಅಧ್ಯಕ್ಷೆ ಪಿಟಿ ಉಷಾ ನಿರಂಕುಶ ಆಡಳಿತ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಕಾರ್ಯಕಾರಿ ಮಂಡಳಿಯ 12 ಸದಸ್ಯರು ಬಂಡಾಯವೆದ್ದಿದ್ದಾರೆ. ಈ ಸಂಬಂಧ ಅವರು ಐಒಎ ಹಿರಿಯ ಅಧಿಕಾರಿ ಜೆರೋಮ್​ ಪೊವಿಗೆ ಪತ್ರ ಬರೆದು ದೂರಿದ್ದಾರೆ.

          ಕಳೆದ ಗುರುವಾರ ನಡೆದ ಐಒಎ ಸಭೆಯಲ್ಲಿ ಸಿಇಒ ರಘುರಾಮ್​ ಅಯ್ಯರ್​ರನ್ನು ವಜಾಗೊಳಿಸಬೇಕೆಂದು ಸದಸ್ಯರು ಒತ್ತಾಯಿಸಿದರು. ಆದರೆ ಮಾಜಿ ಅಥ್ಲೆಟಿಕ್ಸ್​ ತಾರೆ ಪಿಟಿ ಉಷಾ ಇದನ್ನು ಸಾರಾಸಗಟಾಗಿ ತಿರಸ್ಕರಿಸಿದರು. ಹೀಗಾಗಿ ಪಿಟಿ ಉಷಾ ವಿರುದ್ಧ ತಿರುಗಿಬಿದ್ದಿರುವ ಸದಸ್ಯರು, ಐಒಎ ಆಡಳಿತವನ್ನು ಪ್ರಜಾಸತ್ತಾತ್ಮಕವಾಗಿ ನಡೆಸಬೇಕೆಂದು ಒತ್ತಾಯಿಸಿದ್ದಾರೆ.

              ಇದಕ್ಕೆ ಪ್ರತಿಯಾಗಿ ಉಷಾ, ಕಳೆದ ಜನವರಿ 5ರಂದು ನಡೆದ ಇಸಿ ಸಭೆಯಲ್ಲಿ ಐಒಎ ಸಂವಿಧಾನದ ಪ್ರಕಾರವೇ ರಘುರಾಮ್​ ಅಯ್ಯರ್​ರನ್ನು ನೇಮಿಸಲಾಗಿದೆ. ಹೀಗಾಗಿ ಈಗ ಅವರನ್ನು ವಜಾಗೊಳಿಸಲು ಸಕಾರಣವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.


Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries