ತಿರುವನಂತಪುರಂ: ಮಾಜಿ ಎಸ್ಪಿ ಸುಜಿತ್ ದಾಸ್ ಅವರನ್ನು ಸಿಬಿಐ ವಿಚಾರಣೆಗೊಳಪಡಿಸಿದೆ. ಮಲಪ್ಪುರಂ ತಾನೂರಿನಲ್ಲಿ ಪೆÇಲೀಸ್ ಕಸ್ಟಡಿಯಲ್ಲಿದ್ದಾಗ ತಮೀರ್ ಜೆಫ್ರಿ ಎಂಬ ಯುವಕ ಸಾವನ್ನಪ್ಪಿದ ಪ್ರಕರಣದಲ್ಲಿ ವಿಚಾರಣೆ ನಡೆಸಲಾಯಿತು. ಈ ಹಿಂದೆ ಸುಜಿತ್ ದಾಸ್ ಅವರನ್ನು ಈ ಪ್ರಕರಣದಲ್ಲಿ ಒಮ್ಮೆ ವಿಚಾರಣೆಗೆ ಒಳಪಡಿಸಲಾಗಿತ್ತು.
ಶಾಸಕ ಪಿವಿ ಅನ್ವರ್ ಜೊತೆಗಿನ ದೂರವಾಣಿ ಸಂಭಾಷಣೆ ಹೊರಬಿದ್ದ ಬೆನ್ನಲ್ಲೇ ಈ ವಿಚಾರಣೆ ನಡೆದಿದೆ. ಈ ಘಟನೆಯ ನಂತರ ಪತ್ತನಂತಿಟ್ಟದ ಮಾಜಿ ಎಸ್ಪಿ ಸುಜಿತ್ ದಾಸ್ ಅವರನ್ನು ವಿಚಾರಣೆಗಾಗಿ ತಿರುವನಂತಪುರಂನಲ್ಲಿರುವ ಸಿಬಿಐ ಕಚೇರಿಗೆ ಕರೆಸಲಾಗಿತ್ತು.
ನಾಲ್ಕು ಗಂಟೆಗಳ ಸುದೀರ್ಘ ವಿಚಾರಣೆಯಲ್ಲಿ ಹಿಂದಿನ ಹೇಳಿಕೆ ಮತ್ತು ಪ್ರಸ್ತುತ ಹೇಳಿಕೆಯ ನಡುವಿನ ವೈರುಧ್ಯವನ್ನು ಪರಿಶೀಲಿಸಲಾಯಿತು ಎಂದು ವರದಿಯಾಗಿದೆ.
ತಮೀರ್ ಮತ್ತು ಅವನ ತಂಡವನ್ನು ಎಸ್ಪಿ ಅಡಿಯಲ್ಲಿ ಮಾದಕವಸ್ತು ವಿರೋಧಿ ಪಡೆ ಡಾನ್ಸಾಫ್ ಬಂಧಿಸಿತು. ಎಂಡಿಎಂಎಯೊಂದಿಗೆ ತಾನೂರಿನಿಂದ ಬಂಧಿಸಲಾಗಿದೆ ಎಂಬುದು ಪೋಲೀಸರ ಹೇಳಿಕೆ. ಚೇಳಾರಿಯಲ್ಲಿ ಬಾಡಿಗೆ ಕೊಠಡಿಯಿಂದ ಬಂಧಿಸಲಾಗಿದೆ ಎಂದು ಜೆಫ್ರಿ ಸ್ನೇಹಿತರು ಸಿಬಿಐಗೆ ತಿಳಿಸಿದ್ದಾರೆ. ತಮೀರ್ ಕಸ್ಟಡಿಯಲ್ಲಿ ಕ್ರೂರ ಚಿತ್ರಹಿಂಸೆ ಅನುಭವಿಸಿದ್ದಾರೆ ಎಂದು ಮರಣೋತ್ತರ ಪರೀಕ್ಷೆಯ ವರದಿ ಹೇಳುತ್ತದೆ.