ತಿರುವನಂತಪುರಂ: 2024 ಅಕ್ಟೋಬರ್ 13ರಂದು ದುಬೈ ಊದ್ ಮೇತದಲ್ಲಿರುವ ದುಬೈ ಜೆಮ್ ಶಾಲಾ ಸಭಾಂಗಣದಲ್ಲಿ ನಡೆಯುವ ದುಬೈ ಗಡಿನಾಡ ಉತ್ಸವದ ಬಿತ್ತಿಪತ್ರವನ್ನು ಕೇರಳದ ಲೋಕೋಪಯೋಗಿ ಹಾಗೂ ಪ್ರವಾಸೋದ್ಯಮ ಸಚಿವ ಪಿ ಎ ಮೊಹಮ್ಮದ್ ರಿಯಾಜ್ ತಿರುವನಂತಪುರದ ತಮ್ಮ ಕಚೇರಿಯಲ್ಲಿ ಬಿಡುಗಡೆಗೊಳಿಸಿದರು.
ಈ ಸಂದರ್ಭ ಮಂಜೇಶ್ವರ ಶಾಸಕ ಎ ಕೆ ಎಂ ಅಶ್ರಫ್, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ ಆರ್ ಸುಬ್ಬಯಕಟ್ಟೆ, ದುಬೈ ಗಡಿನಾಡ ಉತ್ಸವದ ಸಂಚಾಲಕ ಝಡ್ ಎ ಕಯ್ಯಾರ್ ಮುಂತಾದವರು ಉಪಸ್ಥಿತರಿದ್ದರು.
.