ಕೊಲ್ಲಂ: ಅಡುಗೆ ಅನಿಲ ಸಿಲಿಂಡರ್ ಆನ್ ಮಾಡಿ ಲೈಟರ್ ಪ್ರೆಸ್ ಮಾಡಿದ ಕೂಡಲೇ ಮಹಿಳೆಯೊಬ್ಬರು ಬೆಂಕಿಗೆ ಆಹುತಿಯಾದ ಭಯಾನಕ ಘಟನೆ ಕೊಲ್ಲಂನಲ್ಲಿ ನಡೆದಿದೆ.
ಎನ್.ರತ್ನಮ್ಮ (74) ಮೃತ ದುರ್ದೈವಿ. ಇವರು ಮಯ್ಯನಾಡಿನ ಪಲ್ಲಿಪುರಯಾಜಿಕಂ ನಿವಾಸದಲ್ಲಿ ಮೃತಪಟ್ಟರು. ಸೆ.
ರತ್ನಮ್ಮ ಕಿರುಚುತ್ತಾ ಮನೆಯ ಹಾಲ್ಗೆ ಓಡಿ ಬಂದು ಅಲ್ಲೇ ಕುಸಿದು ಬಿದ್ದರು. ಕಿರುಚಾಟದ ಶಬ್ದ ಕೇಳಿ ಪಕ್ಕದ ಕೊಠಡಿಯಲ್ಲಿ ಮಲಗಿದ್ದ ಸೊಸೆ ಚಿತ್ರಾ ಹಾಲ್ಗೆ ಬಂದು ಗಾಬರಿಯಿಂದಲೇ ರತ್ನಮ್ಮ ಅವರ ಮೈಮೇಲೆ ನೀರು ಸುರಿದು ಬೆಂಕಿ ನಂದಿಸಲು ಯತ್ನಿಸಿದರಾದರು. ಆದರೆ, ಅದು ಪ್ರಯೋಜನವಾಗಲಿಲ್ಲ. ಇದೇ ವೇಳೆ ಅಲ್ಲಿಗೆ ಬಂದ ಮೊಮ್ಮಕ್ಕಳು, ಚಿತ್ರಾರೊಂದಿಗೆ ಸೇರಿ ಗೋಣಿಚೀಲವನ್ನು ಒದ್ದೆ ಮಾಡಿ ಬೆಂಕಿಯನ್ನು ನಂದಿಸಿದರು. ತೀವ್ರವಾಗಿ ಗಾಯಗೊಂಡಿದ್ದ ರತ್ನಮ್ಮ ಅವರನ್ನು ಕೂಡಲೇ ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಶೇ. 50 ರಷ್ಟು ಸುಟ್ಟಗಾಯಗಳಿಂದ ಬಳಲುತ್ತಿದ್ದ ರತ್ನಮ್ಮ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ತಿರುವನಂತಪುರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಯಿತು. ಆದರೆ, ಚಿಕಿತ್ಸೆ ಫಲಿಸದೇ ರತ್ನಮ್ಮ ಮೃತಪಟ್ಟಿದ್ದಾರೆ. ವಿಧಿವಿಜ್ಞಾನ ತಜ್ಞರು ಹಾಗೂ ಅಡುಗೆ ಅನಿಲ ಸಿಲಿಂಡರ್ ಪೂರೈಸುವ ಕಂಪನಿಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ ಎಂದು ಇರವಿಪುರಂ ಪೊಲೀಸರು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಸುಡಲಾಯಿತು. ಇರವಿಪುರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಅಂದಹಾಗೆ ಅಡುಗೆ ಅನಿಲ ಸಾಮಾನ್ಯವಾಗಿ ಅಷ್ಟೊಂದು ವಾಸನೆ ಇರುವುದಿಲ್ಲ. ಹಾಗಾಗಿ ಸೋರಿಕೆ ಆದಾಗ ಪತ್ತೆ ಹಚ್ಚುವುದು ತುಂಬಾ ಕಷ್ಟ. ಆದ್ದರಿಂದ ತುಂಬಾ ವಾಸನೆಯನ್ನು ಹೊಂದಿರುವ ಈಥೈಲ್ ಮೆರ್ಕಾಪ್ಟಾನ್ ಅನ್ನು ಗ್ಯಾಸ್ಗೆ ಸೇರಿಸಲಾಗುತ್ತದೆ. ಸೋರಿಕೆಯಾಗಿ ಅಡುಗೆ ಅನಿಲ ಹೊರಬಂದಾಗ, ಈಥೈಲ್ ಮರ್ಕಾಪ್ಟಾನ್ ವಾಸನೆಯು ಸ್ಥಳದಾದ್ಯಂತ ಹರಡುತ್ತದೆ. ಹೀಗಾಗಿ ಸೋರಿಕೆಯನ್ನು ಸುಲಭವಾಗಿ ಪತ್ತೆ ಹಚ್ಚಬಹುದು. ಗ್ಯಾಸ್ ಆನ್ ಮಾಡುವ ಮುನ್ನ ಏನಾದರೂ ವಾಸನೆ ಇದೆಯೇ ಚೆಕ್ ಮಾಡಿ. ಸಿಲಿಂಡರ್ ಲೀಗ್ ಆಗುತ್ತಿದೆಯೇ ಪರಿಶೀಲಿಸಿ. ಅಡುಗೆ ಕೋಣೆ ವಿಚಾರದಲ್ಲಿ ತುಂಬಾ ಎಚ್ಚರಿಕೆ ವಹಿಸಿ, ಗ್ಯಾಸ್ ಸಿಲಿಂಡರ್ ಅನ್ನು ಅಡುಗೆಮನೆಯ ಹೊರಗೆ ಇಡುವುದರಿಂದ ಸೋರಿಕೆಯ ಅಪಾಯವನ್ನು ತಡೆಯಬಹುದು.