HEALTH TIPS

ಸಿರಿಬಾಗಿಲು ಪ್ರತಿಷ್ಠಾನ ಕಲಾ ಕ್ಷೇತ್ರದ ಅದ್ಭುತ: ಡಿ.ಹರ್ಷೇಂದ್ರ ಕುಮಾರ್ ಧರ್ಮಸ್ಥಳ

                 ಮಧೂರು:  ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿಷ್ಠಾನದ ಸಾಂಸ್ಕøತಿಕ ಭವನಕ್ಕೆ ನಿನ್ನೆ (ಶನಿವಾರ) ಶ್ರೀ ಧರ್ಮಸ್ಥಳ ಶಿಕ್ಷಣ ಕ್ಷೇತ್ರದ ಕಾರ್ಯದರ್ಶಿ, ಧರ್ಮಸ್ಥಳ ಮೇಳದ ಯಜಮಾನರಾದ   ಡಿ.ಹರ್ಷೇಂದ್ರ ಕುಮಾರ್ ಭೇಟಿ ನೀಡಿದ್ದು, ಈ ಸಂದರ್ಭ ಪ್ರತಿಷ್ಠಾನದ ವತಿಯಿಂದ  ಗೌರವ ಗಾನ ನಮನ ಸಲ್ಲಿಸಲಾಯಿತು. 


            ಸಿರಿಬಾಗಿಲು ಪ್ರತಿಷ್ಠಾನ ಯಕ್ಷಗಾನ ಕ್ಷೇತ್ರದಲ್ಲಿ ಅದ್ಭುತ, ಅಧ್ಯಯನ ಯೋಗ್ಯ ಕೊಡುಗೆ ಎಂದು ಹರ್ಷೇಂದ್ರ ಕುಮಾರ್ ಹೇಳಿದರು. ಯಕ್ಷಗಾನದ ಅಧ್ಯಯನಕ್ಕೆ ಬೇಕಾಗುವ ಸಮಗ್ರ ದಾಖಲೆಗಳನ್ನು ಸಂಗ್ರಹಿಸಿ ಮುಂದಿನ ಪೀಳಿಗೆ ಹಸ್ತಾಂತರಿಸುವ ಪ್ರತಿಷ್ಠಾನದ ಸಂಕಲ್ಪ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು. ಮುಂದೆ ಇದೊಂದು ಟೂರಿಸಂ ಕೇಂದ್ರವಾಗಿ ಮೆರೆಯಲಿ, ದೇವರು ಅನುಗ್ರಹಿಸಲಿ. ಸತತ 35 ವರ್ಷ ಧರ್ಮಸ್ಥಳ ಮೇಳದಲ್ಲಿ  ಯಕ್ಷಗಾನ ಭಾಗವತಿಗೆ ಮಾಡುತ್ತಾ ಬಂದಿರುವ  ರಾಮಕೃಷ್ಣ  ಮಯ್ಯ ಸಿರಿಬಾಗಿಲು ಇವರ ಸಾಧನೆ ಮೆಚ್ಚುವಂತದ್ದು, ತನ್ನ ಕಾರ್ಯಕ್ಷೇತ್ರದ ಬಗ್ಗೆ ಅಪಾರ ಗೌರವ, ಕಾಳಜಿಯಿಂದ ಕಾರ್ಯತತ್ಪರರಾದ ಬೆರಣಿಕೆಯ ಕಲಾವಿದರಲ್ಲಿ ಶ್ರೀ ಮಯ್ಯರು ಒಬ್ಬರು. ಸಾಧಿಸಿದರೆ ಏನನ್ನು ಸಾಧಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.ಶ್ರೀ ಮಂಜುನಾಥ ಸ್ವಾಮಿ ಮಹಾಗಣಪತಿಯು ಸದಾ ಅನುಗ್ರಹಿಸಲಿ ಎಂದು ಶುಭ ಹಾರೈಸಿದರು. 


             ಸಭೆಯ ಅಧ್ಯಕ್ಷತೆಯನ್ನು ಆರು ಮೇಳಗಳ ಯಜಮಾನರಾದ  ಕಿಶನ್ ಹೆಗ್ಡೆ ಪಳ್ಳಿ ಇವರು ವಹಿಸಿದ್ದರು.  ಮ್ಯೂಸಿಯಂ ಬಗ್ಗೆ ಇದು ಕೇವಲ ಅದ್ಬುತವಲ್ಲ ಅತ್ಯದ್ಬುತ ಎಂದು ಬಣ್ಣಿಸಿದರು. ಮಯ್ಯ ಭಾಗವತರ ದುಡಿಮೆಯ ಫಲ ಎದ್ದು ಕಾಣುತ್ತಿದೆ .ಇದಕ್ಕೆ ಸಹಕರಿಸಿದ ಎಲ್ಲರೂ ಸ್ತುತ್ಯರ್ಹರು ಎಂದರು. ಒಂದು ಕಲಾವಲಯದ ಬೆಳವಣಿಗೆಗಾಗಿ ವೃತ್ತಿ ಕಲಾವಿದರಾಗಿ ಶ್ರಮಿಸಿದ ಮಹಾ ಕಲಾವಿದ ಎಂದು ಬಣ್ಣಿಸಿದರು. 

          ಮಧೂರು ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ  ಜಯದೇವ ಖಂಡಿಗೆ, ಲಕ್ಷ್ಮಿನಾರಾಯಣ ತಂತ್ರಿ ಕಾವು ಮಠ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಜಗದೀಶ್ ಕೂಡ್ಲು ನಿರೂಪಿಸಿದರು. ಇದೇ ಸಂದರ್ಭದಲ್ಲಿ ಶ್ರೀ ಧರ್ಮಸ್ಥಳ ಮೇಳದ ಪ್ರಬಂಧಕ ಗಿರೀಶ್ ಹೆಗ್ಡೆ ಯವರನ್ನು ಅಭಿನಂದಿಸಲಾಯಿತು. ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಯೋಜನಾಧಿಕಾರಿ ಮುಖೇಶ್ ರವರ ನೇತೃತ್ವದಲ್ಲಿ ಡಿ. ಹμÉೀರ್ಂದ್ರ ಕುಮಾರ್ ಅವರನ್ನು ಗೌರವಿಸಲಾಯಿತು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries