ಬದಿಯಡ್ಕ: ಜಗದ್ಗುರು ಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರ ನಾಲ್ಕನೇ ವರ್ಷದ ಚಾತುರ್ಮಾಸ್ಯ ವ್ರತಾಚರಣೆ ಮಂಗಲೋತ್ಸವ ಸಮಾರಂಭ ಸೆ. 18ರಂದು ಶ್ರೀಮಠದಲ್ಲಿ ಜರುಗಲಿರುವುದು. ಈ ಮೂಲಕ ಕಳೆದ ಎರಡು ತಿಂಗಳ ಕಾಲ ನಡೆದುಬರುತ್ತಿರುವ ವ್ರತಾಚರಣೆ ಸಂಪನ್ನಗೊಳ್ಳಲಿದೆ.
ಬೆಳಗ್ಗೆ 6.30ಕ್ಕೆ ಪ್ರಾತ:ಕಾಲದ ಪೂಜೆ, 8.30ಕ್ಕೆ ಮೃತ್ತಿಕಾ ವಿಸರ್ಜನೆ, ಸೀಮೋಲ್ಲಂಘನ, 9ಕ್ಕೆ ಭಜನೆ, 11ಕ್ಕೆ 60ದಿವಸಗಳ ಅಖಂಡ ಭಜನಾ ಸಂಕೀರ್ತನೆ ಸಮಾರೋಪ ಸಮಾರಂಭ ನಡೆಯುವುದು. ಬೆಳ್ತಂಗಡಿ ಕನ್ಯಾಡಿ ಶ್ರೀರಾಮ ಕ್ಷೇತ್ರದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡುವರು. 11.45ಕ್ಕೆ ಪೂರಕ್ಕಳಿ ನಡೆಯುವುದು. ಮಾಜಿ ಶಾಸಕ, ಕೇರಳ ಪೂರಕ್ಕಳಿ ಅಕಾಡಮಿ ಅಧ್ಯಕ್ಷ ಕೆ. ಕುಞÂರಾಮನ್ ಅವರ ನೇತೃತ್ವದಲ್ಲಿ ಪೂರಕ್ಕಳಿ ನಡೆಯುವುದು. ಮಧಾಹ್ನ 12ಕ್ಕೆ ಅಷ್ಟೋತ್ತರ ಶತ ನಾಳಿಕೇರ ಯಾಗದ ಪೂರ್ಣಾಹುತಿ ನಡೆಯುವುದು. 2ಗಂಟೆಗೆ ಮಂತ್ರಾಕ್ಷತೆ, 2.30ಕ್ಕೆ ಸಮಾರೋಪ ಸಮಾರಂಭ ನಡೆಯುವುದು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಅಧ್ಯಕ್ಷತೆ ವಹಿಸುವರು. ಚಾತುರ್ಮಾಸ್ಯ ಸಮಿತಿ ಗೌರವಾಧ್ಯಕ್ಷ ಟಿ. ಶ್ಯಾಮ ಭಟ್ ಗೌರವ ಉಪಸ್ಥಿತರಿರುವರು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ಮತ್ತಿಹಳ್ಳಿ ಮುಖ್ಯ ಅತಿಥಿಯಾಗಿ ಭಾಗವಹಿಸುವರು.
ಸಂಜೆ 4ರಿಂದ ಇಂದಿರಾ ಶರ್ಮ ಬೆಂಗಳೂರು ಹಾಗೂ ಮೇಧಾ ಮಂಜುನಾಥ್ ಬೆಂಗಳೂರು ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯುವುದು. ವಯಲಿನ್‍ನಲ್ಲಿ ತನ್ಮಯೀ ಉಪ್ಪಂಗಳ, ಮೃದಂಗದಲ್ಲಿ ಆನೂರು ದತ್ತತ್ರೇಯ ಶರ್ಮ ಸಹಕರಿಸುವರು. ಸಂಜೆ 7ರಿಂದ ಶಬರಿಮಲೆ ಹರಿವರಾಸನಂ ಪ್ರಶಸ್ತಿ ಪುರಸ್ಕøತ ಕಲೈ ಮಾಮಣಿ ವೀರಮಣಿ ರಾಜು ಮತ್ತು ಭಕ್ತಿಗಾನ ಗಂಧರ್ವ ಅಭಿಷೇಕ್ ರಾಜು ಚೆನ್ನೈ ಮತ್ತು ಬಳಗದವರಿಂದ ಭಕ್ತಿಗಾನ ಸಂಧ್ಯಾ ಕಾರ್ಯಕ್ರಮ ನಡೆಯುವುದು. ಜುಲೈ 21ರಂದು ಚಾತುರ್ಮಾಸ್ಯ ಕಾರ್ಯಕ್ರಮ ಆರಂಭಗೊಂಡಿದ್ದು, ನಿರಂತರ ಧಾರ್ಮಿಕ, ಸಾಂಸ್ಕøತಿಕ, ಸಾಮಾಜಿಕ ಚಟುವಟಿಕೆಗಳು ನಡೆದು ಬಂದಿದೆ.