ತಿರುವನಂತಪುರ: ಕೇರಳದಲ್ಲಿ ಜನಸಾಮಾನ್ಯರ ರಕ್ಷಣೆ ಮಾಡಬೇಕಾದ ಪೋಲೀಸರೇ ಹಿಂಸಾಚಾರದಲ್ಲಿ ಶಾಮೀಲಾಗಿರುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬಿಜೆಪಿ ಮುಖಂಡ, ಮಾಜಿ ಕೇಂದ್ರ ಸಚಿವ ವಿ.ಮುರಳೀಧರನ್ ಹೇಳಿದ್ದಾರೆ.
ಪಿಣರಾಯಿ ವಿಜಯನ್ ಆಳ್ವಿಕೆಯಲ್ಲಿ ಪೋಲೀಸರು ಸಿಪಿಎಂನ ಗುಲಾಮರಾಗಿದ್ದಾರೆ ಎಂದು ತಿಳಿಸಿದರು.
ಕಿಲಿಮನೂರು ಪೋಲೀಸ್ ಠಾಣೆಯಲ್ಲಿ ಬಿಎಂಎಸ್ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ವಿ.ಮುರಳೀಧರನ್ ಮಾತನಾಡಿದರು.
ಜನರ ಬೇಡಿಕೆಗಳ ಈಡೇರಿಕೆಗೆ ಮುಂದಾಗುವ ಜನಪ್ರತಿನಿಧಿಗಳಿಗೂ ಪೋಲೀಸರಿಂದ ಅವಮಾನವಾಗುತ್ತಿದೆ. ಸಿಪಿಎಂ ನಾಯಕರು ತಮ್ಮ ಹಿತಾಸಕ್ತಿಗೆ ತಕ್ಕಂತೆ ನಡೆದುಕೊಳ್ಳುತ್ತಿದ್ದರೆ ಜನ ಪೆÇಲೀಸ್ ಠಾಣೆಗೆ ಬಂದು ತಮ್ಮ ಜವಾಬ್ದಾರಿಯನ್ನು ನೆನಪಿಸುತ್ತಾರೆ ಎಂದವರು ಎಚ್ಚರಿಸಿದರು.