HEALTH TIPS

ಭೂಕುಸಿತ ಕಂಡ ವಯನಾಡ್‌ ಗ್ರಾಮಗಳಲ್ಲಿ ಕಾಣದ ಓಣಂ ಸಂಭ್ರಮ

         ಯನಾಡ್ : ಭೀಕರ ಭೂಕುಸಿತ ಕಂಡ ವಯನಾಡ್ ಜಿಲ್ಲೆಯ ಮುಂಡಕ್ಕೈ ಮತ್ತು ಚೂರಲ್‌ಮಲ ಗ್ರಾಮಗಳಲ್ಲಿ ಭಾನುವಾರ 'ತಿರುಓಣಂ' ಹಬ್ಬದ ಯಾವುದೇ ಸಂಭ್ರಮ ಇರಲಿಲ್ಲ. 'ಪೂಕಳಂ' (ಹೂವಿನ ಚಿತ್ತಾರ), 'ಊಂಜಲ್‌' (ಉಯ್ಯಾಲೆ) ಅಥವಾ ಯಾವುದೇ ಇತರೆ ಆಚರಣೆಗಳೂ ಕಂಡುಬರಲಿಲ್ಲ.

       ವಯನಾಡ್ ಜಿಲ್ಲೆಯ ಕುಗ್ರಾಮಗಳಲ್ಲಿ ಕಳೆದ ವರ್ಷ ಜಾತಿ ಹಾಗೂ ಧಾರ್ಮಿಕ ಅಡೆತಡೆಗಳನ್ನೂ ಮೀರಿ ಜನರು ಸಂಭ್ರಮದಿಂದ ಪೂಕಳಂ ಬಿಡಿಸಿ, ಸಾಂಪ್ರದಾಯಿಕ ಆಟಗಳನ್ನು ಆಡಿದ್ದರು. ಗ್ರಾಮಗಳ ದೇವಸ್ಥಾನ ಮತ್ತು ಶಾಲಾ ಮೈದಾನಗಳಲ್ಲಿ ಹಬ್ಬದ ಆಚರಣೆಗಳನ್ನು ಕೈಗೊಂಡಿದ್ದರು.

           ಮುಂಡಕ್ಕೈ ಮತ್ತು ಚೂರಲ್‌ಮಲ ಸ್ಥಳೀಯರು ಇದೀಗ ಮನೆ ಕಳೆದುಕೊಂಡು ಬಾಡಿಗೆ ಅಥವಾ ಹತ್ತಿರದಲ್ಲಿರುವ ತಮ್ಮ ಸಂಬಂಧಿಕರ ಮನೆಗಳಲ್ಲಿ ವಾಸವಾಗಿದ್ದಾರೆ. ಅವರಿಗೆ ಹಬ್ಬದ ಯಾವುದೇ ಸಂಭ್ರಮವಿಲ್ಲ.

             ವಯನಾಡ್‌ನಲ್ಲಿ ಭೀಕರ ಭೂಕುಸಿತ ಸಂಭವಿಸಿದ ಕಾರಣಕ್ಕೆ ಯಾವುದೇ ಓಣಂ ಅಧಿಕೃತ ಆಚರಣೆ ಇರುವುದಿಲ್ಲ ಎಂದು ರಾಜ್ಯ ಸರ್ಕಾರ ಈಗಾಗಲೇ ಘೋಷಣೆ ಮಾಡಿತ್ತು. ಶನಿವಾರ ತಮ್ಮ ಓಣಂ ಸಂದೇಶ ನೀಡಿದ್ದ ಕೇರಳ ಮುಖ್ಯಮಂತ್ರಿ, 'ರಾಜ್ಯ ಸರ್ಕಾರ ಈಗ ಮನೆಗಳ ಪುನರ್‌ನಿರ್ಮಾಣ ಮಾಡುವ, ಜನಜೀವನವನ್ನು ಸಹಜ ಸ್ಥಿತಿಗೆ ತರುವ ಪ್ರಮುಖ ಕಾರ್ಯದಲ್ಲಿ ನಿರತವಾಗಿದೆ. ಆ ಮೂಲಕ ಭೂಕುಸಿತದ ಪ್ರದೇಶಗಳನ್ನು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಕ್ರಿಯಾಶೀಲವಾಗಿಸುವ ಕೆಲಸದಲ್ಲಿದೆ. ಮುಖ್ಯಮಂತ್ರಿಗಳ ಸಂಕಷ್ಟ ಪರಿಹಾರ ನಿಧಿಗೆ ಜನರು ಕೊಡುಗೆ ನೀಡುವ ಮೂಲಕ ಭೂಕುಸಿದ ಪ್ರದೇಶಗಳ ಪುನರ್‌ನಿರ್ಮಾಣ ಕಾರ್ಯದಲ್ಲಿ ಕೈಜೋಡಿಸಬೇಕು' ಎಂದು ಮನವಿ ಮಾಡಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries