HEALTH TIPS

ಮೋದಿ ವಿರುದ್ಧದ ಖರ್ಗೆ ಹೇಳಿಕೆ ಅಸಹ್ಯಕರ: ಅಮಿತ್‌ ಶಾ ವಾಗ್ದಾಳಿ

 ವದೆಹಲಿ: ಸಾರ್ವಜನಿಕ ಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ಮೋದಿಯವರ ಬಗ್ಗೆ ಹೇಳಿಕೆಗಳನ್ನು ನೀಡಿರುವುದು ಅಸಹ್ಯಕರ ಮತ್ತು ಅವಮಾನಕರ ಎಂದು ಅಮಿತ್ ಶಾ ಕಿಡಿಕಾರಿದ್ದಾರೆ.

ತಮ್ಮ ವೈಯಕ್ತಿಕ ಆರೋಗ್ಯ ವಿಷಯಗಳಿಗೆ ಅನಗತ್ಯವಾಗಿ ಪ್ರಧಾನಿಯವರನ್ನು ಎಳೆತಂದ ಖರ್ಗೆ ಅವರು, ಪ್ರಧಾನಿ ಹುದ್ದೆಯಿಂದ ಮೋದಿಯವರನ್ನು ಇಳಿಸುವವರೆಗೂ ಸಾಯುವುದಿಲ್ಲ ಎಂದು ಹೇಳಿದ್ದಾರೆ.

ಇದು ಕೆಟ್ಟ ಹಗೆತನದ ಪ್ರದರ್ಶನ ಎಂದು ವಾಗ್ದಾಳಿ ನಡೆಸಿದ್ದಾರೆ.

ಭಾನುವಾರ ಜಮ್ಮುವಿನ ಜಸರೋಠಾದಲ್ಲಿ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡುವ ವೇಳೆ ಖರ್ಗೆ ಅಸ್ವಸ್ಥರಾದರು. ಬಳಿಕ ಚೇತರಿಸಿಕೊಂಡು ಮಾತನಾಡಿ, ಪ್ರಧಾನಿ ಮೋದಿಯನ್ನು ಅಧಿಕಾರದಿಂದ ಕೆಳಗಿಳಿಸುವವರೆಗೂ ಸಾಯುವುದಿಲ್ಲ ಎಂದಿದ್ದರು.


ಈ ಕುರಿತು ಎಕ್ಸ್‌ನಲ್ಲಿ ಬರೆದುಕೊಂಡಿರುವ ಅಮಿತ್‌ ಶಾ, 'ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ತಮ್ಮ ಭಾಷಣದ ವೇಳೆ ಅಸಹ್ಯಕರ ಮತ್ತು ಅವಮಾನಕರವಾಗಿ ವರ್ತಿಸುವಲ್ಲಿ ತಮ್ಮನ್ನು ಮತ್ತು ತಮ್ಮ ನಾಯಕರು ಮತ್ತು ಪಕ್ಷವನ್ನು ಮೀರಿಸಿದ್ದಾರೆ. ಕಾಂಗ್ರೆಸಿಗರು ಪ್ರಧಾನಿ ಮೋದಿಯನ್ನು ಎಷ್ಟು ದ್ವೇಷಿಸುತ್ತಾರೆ ಮತ್ತು ಅವರ ಬಗ್ಗೆ ಭಯವಿದೆ ಎನ್ನುವುದಕ್ಕೆ ಖರ್ಗೆ ಹೇಳಿಕೆಗಳೇ ಉದಾಹರಣೆಯಾಗಿದೆ. ಹೀಗಿದ್ದರೂ ಅವರು ಬೇಗ ಗುಣವಾಗಲಿ ಎಂದು ದೇವರಲ್ಲಿ ಕೇಳಿಕೊಳ್ಳುತ್ತೇನೆ' ಎಂದು ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries