ಪೆರ್ಲ : ಮಣಿಯಂಪಾರೆಯ ಸಂತ ಲಾರೆನ್ಸರ ಚರ್ಚಿನ ಕೆಥೋಲಿಕ್ ಸಭಾದ ವತಿಯಿಂದ "ಓಣಂ ಉಡ್ಕಾಣಾಂ" ಎಂಬ ವೈವಿಧ್ಯಮಯ ಕಾರ್ಯಕ್ರಮ ಜರಗಿತು.
ಚರ್ಚಿನ ಧರ್ಮಗುರುಗಳಾದ ನೇಲ್ಸನ್ ಡಿ ಆಲ್ಮೇಡಾ ಕಾರ್ಯಕ್ರಮ ಉದ್ಘಾಟಿಸಿದರು. ಚರ್ಚ್ ಪಾಲನ ಸಮಿತಿ ಉಪಾಧ್ಯಕ್ಷ ವಿಲ್ಸನ್ ಡಿ ಸೋಜ ಸಭೆಯ ಅಧ್ಯಕ್ಷತೆ ವಹಿಸಿದ್ದರು.ಮಂಗಳೂರು ಪ್ರಾಂತ್ಯ ಕೆಥೋಲಿಕ್ ಸಭಾದ ಅಧ್ಯಕ್ಷ ಆಲ್ವೀನ್ ಡಿಸೋಜ ಪಾನೀರ್ ಮುಖ್ಯ ಅತಿಥಿಗಳಾಗಿದ್ದರು. ಕಥೋಲಿಕ್ ಸಭಾ ಕಾಸರಗೋಡು ವಲಯಾಧ್ಯಕ್ಷ ರಾಜು ಜೋನ್ ಡಿಸೋಜ ಎಣ್ಮಕಜೆ ಉಪಸ್ಥಿತರಿದ್ದರು. ಘಟಕಾಧ್ಯಕ್ಷ ಅಮೃತ್ ಲಾಲ್ ಡಿಸೋಜ ಬೊಲ್ಕಿನಡ್ಕ ಸ್ವಾಗತಿಸಿ, ಕವಿತಾ ಮೋರಸ್ ವಂದಿಸಿದರು. ರೋಘಿನ್ ಡಿಸೋಜ ನಿರೂಪಿಸಿದರು. ಬಳಿಕ ವಿವಿಧ ಮನರಂಜನೀಯ ಆಟೋಟ ಸ್ಪರ್ಧೆಗಳು, ಓಣಂ ಔತಣಕೂಟ ಜರಗಿತು.