ಮಲಪ್ಪುರಂ: ತಾನೂರ್ ಕಸ್ಟಡಿ ಹತ್ಯೆಯ ಸಂಚಿನ ತನಿಖೆಗೆ ಆಗ್ರಹಿಸಿ ಹತ್ಯೆಗೀಡಾದ ತಮೀರ್ ಜೆಫ್ರಿ ಕುಟುಂಬ ಮತ್ತೆ ಸಿಬಿಐಗೆ ದೂರು ಸಲ್ಲಿಸಿದೆ.
ಪ್ರಕರಣವನ್ನು ನಾಲ್ಕು ಜನರಿಗೆ ಸೀಮಿತಗೊಳಿಸಬಾರದು ಮತ್ತು ಉನ್ನತ ಅಧಿಕಾರಿಗಳ ಪಾತ್ರವನ್ನು ತನಿಖೆ ಮಾಡಬೇಕು ಎಂದು ಕುಟುಂಬ ಒತ್ತಾಯಿಸಿದೆ.
ಸಿಬಿಐ ಮಾಹಿತಿ ನೀಡುತ್ತಿಲ್ಲ ಎಂದು ತಮೀರ್ ಕುಟುಂಬ ಆರೋಪಿಸಿದೆ. ಷಡ್ಯಂತ್ರದ ಕುರಿತು ಸಿಬಿಐ ತನಿಖೆ ನಡೆಸದಿದ್ದರೆ ಹೈಕೋರ್ಟ್ ಮೊರೆ ಹೋಗಲಾಗುವುದು ಎಂದು ತಿಳಿಸಲಾಗಿದೆ.
ತಾನೂರಿನ ಕಸ್ಟಡಿ ಕೊಲೆ ಪ್ರಕರಣದಲ್ಲಿ ಮಲಪ್ಪುರಂ ಎಸ್ಪಿಯ ದನ್ಸಾಫ್ ತಂಡದ ಸದಸ್ಯರಾಗಿದ್ದ ನಾಲ್ವರು ಪೋಲೀಸರನ್ನು ಸಿಬಿಐ ಬಂಧಿಸಿತ್ತು. ತಾನೂರು ಪೆÇಲೀಸ್ ಠಾಣೆಯ ಹಿರಿಯ ಸಿಪಿಒ ಜಿನೇಶನ್ ಪ್ರಕರಣದ ಮೊದಲ ಆರೋಪಿಯಾಗಿದ್ದಾರೆ. ಎರಡನೆ ಆರೋಪಿ ಪರಪ್ಪನಂಗಡಿ ಠಾಣೆಯ ಸಿಪಿಒ ಅಲ್ಬಿನ್ ಆಗಸ್ಟಿನ್, ಮೂರನೇ ಆರೋಪಿ ಕಲ್ಪಕಂಚೇರಿ ಠಾಣೆಯ ಸಿಪಿಒ ಅಭಿಮನ್ಯು ಮತ್ತು ನಾಲ್ಕನೇ ಆರೋಪಿ ತಿರುರಂಗಡಿ ಠಾಣೆಯ ಸಿಪಿಒ ವಿಪಿನ್.
ಕಳೆದ ವರ್ಷ ಆಗಸ್ಟ್ 1 ರಂದು ತಮೀರ್ ಜೆಫ್ರಿ ಅವರು ಪೆÇಲೀಸ್ ಕಸ್ಟಡಿಯಲ್ಲಿದ್ದಾಗ ಕುಸಿದುಬಿದ್ದು ಸಾವನ್ನಪ್ಪಿದ್ದರು. ಮಲಪ್ಪುರಂ ಎಸ್ಪಿಯ ಆ್ಯಂಟಿ ನಾರ್ಕೋಟಿಕ್ ಸ್ಕ್ವಾಡ್ ಡ್ಯಾನ್ಸಾಫ್ ತಂಡವು ಡ್ರಗ್ಸ್ ಹೊಂದಿದ್ದಕ್ಕಾಗಿ ತಮೀರ್ ಜೆಫ್ರಿ ಮತ್ತು ಅವರ ಐವರು ಸ್ನೇಹಿತರನ್ನು ವಶಕ್ಕೆ ತೆಗೆದುಕೊಂಡಿದ್ದರು ಎಂದು ಎಫ್‍ಐಆರ್ ತಿಳಿಸಿದೆ. ತಮೀರ್ ಜಾಫ್ರಿ ಥಳಿತದಿಂದ ಸಾವನ್ನಪ್ಪಿದ್ದಾನೆ ಎಂಬುದು ಪೋಸ್ಟ್ ಮಾಟರ್ಂ ವರದಿಯಲ್ಲಿ ಸ್ಪಷ್ಟವಾಗಿದೆ. ಅದರ ನಂತರ, ತನಿಖೆಯನ್ನು ಕ್ರೈಂ ಬ್ರಾಂಚಿಗೆ ನೀಡಲಾಯಿತು.
ಇದು ತಾನೂರ್ ಕಸ್ಟೋಡಿಯಲ್ ಡೆತ್ ಕೇಸ್ ಅನ್ನು ಹಾಳು ಮಾಡುವ ಯತ್ನ ಎಂದು ಮೃತ ತಮೀರ್ ಜೆಫ್ರಿ ಕುಟುಂಬ ಆರೋಪಿಸಿದ ನಂತರ ಮಾನವ ಹಕ್ಕುಗಳ ಆಯೋಗ ಮಧ್ಯಪ್ರವೇಶಿಸಿತು. ಕಸ್ಟಡಿ ಸಾವಿನ ಪ್ರಕರಣವನ್ನು ಪರಪ್ಪನಂಗಡಿ ಜ್ಯುಡಿಷಿಯಲ್ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಗಿದ್ದು, ಮೊದಲ ಹಂತದ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. ನಾಲ್ವರ ವಿರುದ್ಧ ಕೊಲೆ ಆರೋಪ ಹೊರಿಸಲಾಗಿದೆ. ಆದರೆ ತನಿಖೆ ನಿಷ್ಪರಿಣಾಮಕಾರಿ ಎಂದು ಆರೋಪಿಸಿ ಕುಟುಂಬಸ್ಥರು ಮುಂದಾದ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿತ್ತು. ನಂತರ ಆರೋಪಿಗಳ ಪಟ್ಟಿಯಲ್ಲಿದ್ದ ನಾಲ್ವರನ್ನು ಬಂಧಿಸಲಾಯಿತು.