ತಿರುವನಂತಪುರಂ: ಪತ್ತನತಿಟ್ಟದ ಜಿಲ್ಲಾ ಪೋಲೀಸ್ ಮುಖ್ಯಸ್ಥರಾಗಿದ್ದ ಐಪಿಎಎಸ್ ಸುಜಿತ್ ದಾಸ್ ಅವರನ್ನು ಅಮಾನತುಗೊಳಿಸಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆದೇಶ ಹೊರಡಿಸಿದ್ದಾರೆ.
ಶಾಸಕ ಅನ್ವರ್ ಅವರೊಂದಿಗೆ ಸುಜಿತ್ ದಾಸ್ ಮಾಡಿದ ವಿವಾದಾತ್ಮಕ ದೂರವಾಣಿ ಕರೆ ವಿವಾದವಾಗಿತ್ತು. ಎಡಿಜಿಪಿ ಎಂ.ಆರ್. ಅಜಿತ್ ಕುಮಾರ್ ತಮ್ಮ ಸಂಪರ್ಕಗಳ ಮೂಲಕ ಹಣಕಾಸಿನ ವಹಿವಾಟು ನಡೆಸುತ್ತಿದ್ದರು ಎಂದು ಸುಜಿತ್ ದಾಸ್ ಅನ್ವರ್ ಗೆ ತಿಳಿಸಿದ್ದರು.
ಡಿಐಜಿ ಅಜಿತಾ ಬೇಗಂ ಅವರಿಗೆ ಸುಜಿತ್ ದಾಸ್ ವಿರುದ್ಧ ಬಂದಿರುವ ಆರೋಪಗಳ ತನಿಖೆಯನ್ನು ಪ್ರಾಥಮಿಕವಾಗಿ ವಹಿಸಲಾಗಿತ್ತು. ಅವರು ತಮ್ಮ ವರದಿಯಲ್ಲಿ ಗಂಭೀರ ಲೋಪಗಳನ್ನು ಕಂಡುಕೊಂಡಿದ್ದಾರೆ. ಅದರ ಬೆನ್ನಲ್ಲೇ ಮುಖ್ಯಮಂತ್ರಿಗಳು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಮೋನ್ ಸನ್ ಮಾವುಂಕಲ್ ಅವರ ಹಣಕಾಸು ದುರ್ಬಳಕೆ ಪ್ರಕರಣದ ಆರೋಪಿ ಐಜಿ ಜಿ. ಲಕ್ಷ್ಮಣ ಅವರ ಅಮಾನತು ಹಿಂಪಡೆಯಲಾಗಿದೆ. ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ ನಂತರ 360 ದಿನಗಳ ಅಮಾನತು ಹಿಂಪಡೆದು ಅವರನ್ನು ಮತ್ತೆ ಸೇವೆಗೆ ಸೇರಿಸಲಾಯಿತು. ಪೋಲೀಸ್ ತರಬೇತಿ ಐಜಿಯಾಗಿ ಅವರ ಮರು ನೇಮಕವಾಗಿದೆ. ಅಮಾನತು ಪರಿಶೀಲನಾ ಸಮಿತಿಯ ಶಿಫಾರಸಿನ ಮೇರೆಗೆ ತನಿಖೆ ಮುಗಿದ ನಂತರ ಅವರನ್ನು ಮರುಸೇರ್ಪಡೆಗೊಳಿಸಲಾಗಿದೆ.