ಮಂಜೇಶ್ವರ: ಪ್ರವಾಸೋದ್ಯಮ ದಿನದ ಅಂಗವಾಗಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಕಾಲೇಜು ಹಾಗೂ ಜಿಲ್ಲಾ ಪ್ರವಾಸೋದ್ಯಮ ಪ್ರಮೋಷನ್ ಕೌನ್ಸಿಲ್ ಜಂಟಿಯಾಗಿ ಆಯೋಜಿಸಿದ್ದ ಪ್ರವಾಸೋದ್ಯಮ ಸಂವಾದವನ್ನು ಜಿಲ್ಲಾಧಿಕಾರಿ ಇಂಪಾಶೇಖರ್ ಉದ್ಘಾಟಿಸಿದರು. ಪ್ರವಾಸೋದ್ಯಮ ವಿಭಾಗದ ಮುಖ್ಯಸ್ಥೆ ಡಾ.ಸಿಂಧು ಜೋಸೆಫ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಡಿಟಿಪಿಸಿ ಕಾರ್ಯದರ್ಶಿ ಲಿಜೋ ಜೋಸೆಫ್, ಕಾರ್ಯಕ್ರಮ ಸಂಯೋಜಕ ಅಖಿಲ್ ದೇವ್ ಹಾಗೂ ಕಾಲೇಜು ಯೂನಿಯನ್ ಚೇರ್ಮನ್ ದಾವೂದ್ ಮಾತನಾಡಿದರು.
ಮೌಲವಿ ಟ್ರಾವಲ್ಸ್ ಮತ್ತು ಹಾಲಿಡೇಸ್ ನಿರ್ದೇಶಕ ಅಬ್ದುಲ್ಲಾ, ಬೇಕಲ ಟೂರಿಸಂ ಪ್ರೆಟರ್ನಿಟಿ ಚೇರ್ಮನ್ ಸೈಫುದೀನ್ ಕಳನಾಡ್, ತಲತ್ತೂರು ಹೆರಿಟೇಜ್ ಹೋಂಸ್ಟೇ ಮಾಲಕಿ ಶ್ಯಾಮಲಾ, ನೆಯ್ಟಾರ್ ಗ್ರೀನ್ ಡೆಸ್ಟಿನೇಶನ್ ಏμÁ್ಯ ಪೆಸಿಫಿಕ್ ಸಂಯೋಜಕ ಮಹದೇವನ್ ಪಿ, ಹ್ಯಾಪಿ ಟು ಹೆಲ್ಪ್ ಟೂರಿಸಂ ಎಂಎ ಕಾದರ್ ಮತ್ತು ಟಿಜಿ ಗಂಗಾಧರನ್ ಪ್ರವಾಸೋದ್ಯಮ ಚರ್ಚೆಯಲ್ಲಿ ಭಾಗವಹಿಸಿದ್ದರು.
ಪ್ರವಾಸೋದ್ಯಮದಲ್ಲಿ ಪದವಿ ಮುಗಿಸಿದ ನಂತರ ಉದ್ಯೋಗಾವಕಾಶಗಳ ಹೊರತಾಗಿ ಉದ್ಯಮಶೀಲತೆ ಕ್ಷೇತ್ರದಲ್ಲಿ ಕೊನೆಯಿಲ್ಲದ ಸಾಧ್ಯತೆಗಳಿವೆ ಎಂದು ಉದ್ಯಮಶೀಲತೆ ಕುರಿತ ಸಂವಾದದಲ್ಲಿ ಭಾಗವಹಿಸಿದ್ದ ತಜ್ಞರು ಅಭಿಪ್ರಾಯಪಟ್ಟರು.