ಕಾಸರಗೋಡು: ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯ ಮವ್ವಲ್‍ನಲ್ಲಿ ಕಂಟೈನರ್ ಲಾರಿಯಿಂದ ಮಾರ್ಬಲ್ ಇಳಿಸುವ ಮಧ್ಯೆ ಮೈಮೇಲೆ ಬಿದ್ದು, ಮಧ್ಯಪ್ರದೇಶ ನಿವಾಸಿ ಜಮೀನ್‍ಖಾನ್(42)ದಾರುಣವಾಗಿ ಮೃತಪಟ್ಟಿದ್ದಾರೆ.
ಬೇಕಲ ಮೀತ್ತಲ್ ಮವ್ವಲ್ ಸನಿಹದ ಮಸೀದಿ ಬಳಿ ಹೊಸದಾಗಿ ನಿರ್ಮಿಸಿಸುತ್ತಿರುವ ಮನೆಗೆ ಮಾರ್ಬಲ್ ಇಳಿಸುವ ಮಧ್ಯೆ ದುರಂತ ಸಂಭವಿಸಿದೆ. ದೊಡ್ಡ ಲಾರಿ ಹೊಸ ಮನೆ ನಿರ್ಮಾಣವಾಗುವ ಪ್ರದೇಶಕ್ಕೆ ಸಾಗಲು ಅನಾನುಕೂಲವಿದ್ದ ಹಿನ್ನೆಲೆಯಲ್ಲಿ ಕಂಟೈನರ್‍ನಿಂದ ಕೆಳಗಿಳಿಸಿ, ಮಿನಿ ಲಾರಿಗೆ ಹೇರುವ ಮಧ್ಯೆ ಮಾರ್ಬಲ್ ಏಕಾಏಕಿ ಮೈಮೇಲೆ ಬಿದ್ದಿದೆ. ಜೆಗಿದ್ದ ಕಾರ್ಮಿಕರನ್ನು ರಕ್ಷಿಸಿದರೂ, ಜಮೀನ್‍ಖಾನ್ ಅವರು ಮಾರ್ಬಲ್ ಸಂದಿಯಲ್ಲಿ ಸಿಕುಕಿಕೊಂಡಿದ್ದು, ಅಗ್ನಿಶಾಮಕ ದಳ ಆಗಮಿಸಿ ಇವರನ್ನು ಹೊರತೆಗೆದು ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ.