ಕಾಸರಗೋಡು: ಕೇಂದ್ರ ಸರ್ಕಾರವು ದೇಶ ಮತ್ತು ಜನ ಸಾಮಾನ್ಯರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಧೋರಣೆ ಮತ್ತು ನಾಗರಿಕ ಸೇವೆಯನ್ನು ದುರ್ಬಲಗೊಳಿಸುವ ಕ್ರಮಗಳಿಂದ ಹಿಂದೆ ಸರಿಯುವಂತೆ ಒತ್ತಾಯಿಸಿ. ರಾಜ್ಯ ಸರ್ಕಾರಿ ನೌಕರರ ಒಕ್ಕೂಟ(ಎಫ್‍ಎಸ್‍ಇಟಿಒ)ದ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ, ಧರಣಿ ಹಮ್ಮಿಕೊಳ್ಳಲಾಯಿತು. ಎಫ್‍ಎಸ್‍ಇಟಿಒ ನೇತೃತ್ವದಲ್ಲಿ ಸೆಪ್ಟೆಂಬರ್ 26ನ್ನು ಅಖಿಲ ಭಾರತ ಪ್ರತಿಭಟನಾ ದಿನವನ್ನಾಗಿ ಆಚರಿಸುವ ಅಂಗವಾಗಿ, ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಧರಣಿ ಆಯೋಜಿಸಲಾಗಿತ್ತು.
ಪಿಎಫ್‍ಆರ್‍ಡಿಎ ಕಾಯ್ದೆ ರದ್ದುಪಡಿಸಬೇಖು, ಹಳೇ ಪಿಂಚಣಿ ಯೋಜನೆ ಮುಂದುವರಿಸಬೇಖು, ಕೇರಳದ ಮೇಲಿನ ಕೇಂದ್ರ ಸರ್ಕಾರದ ಆರ್ಥಿಕ ದಿಗ್ಬಂಧನ ಕೊನೆಗೊಳಿಸಬೇಕು, ಸರ್ಕಾರಿ ಯಾ ಸಾರ್ವಜನಿಕ ವಲಯದ ಉದ್ಯಮಗಳ ಖಾಸಗೀಕರಣ ಕೊನೆಗೊಳಿಸಬೇಖು, ತುಟ್ಟಿ ಭತ್ಯೆ ಮತ್ತು ವೇತನ ಪರಿಷ್ಕರಣೆ ಬಾಕಿ ಬಿಡುಗಡೆ ಮಾಡಬೇಕು ಮುಂತಾದ ಬೇಡಿಕೆ ಮುಂದಿರಿಸಿ ಧರಣಿ ಆಯೋಜಿಸಲಾಗಿತ್ತು.
ಸಿವಿಲ್ ಸ್ಟೇಷನ್ ವಠಾರದಲ್ಲಿ ನಡೆದ ಧರಣಿಯನ್ನು ಸಂಘಟನೆ ರಾಜ್ಯಾಧ್ಯಕ್ಷೆ ಕೆ.ಬದರುನ್ನೀಸಾ ಉದ್ಘಾಟಿಸಿದರು. ಜಿಲ್ಲಾಧ್ಯಕ್ಷ ಕೆ.ಭಾನುಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಎನ್ ಜಿಒ ಯೂನಿಯನ್ ರಾಜ್ಯ ಕಾರ್ಯದರ್ಶಿ ಕೆ.ವಿಜಯಕುಮಾರ್, ವಿ.ಚಂದ್ರನ್, ಪವಿತ್ರನ್, ಮನೋಜಕುಮಾರ್, ರಾಜೀವ್ ಉಪಸ್ಥಿತರಿದ್ದರು. ಜಿಲ್ಲಾ ಕಾರ್ಯದರ್ಶಿ ಕೆ.ಹರಿದಾಸ್ ಸ್ವಾಗತಿಸಿದರು. ಕೆ.ವಿ.ರಾಘವನ್ ವಂದಿಸಿದರು.