HEALTH TIPS

ನಿರಾಹಾರ ಮುಷ್ಕರದ ಮಧ್ಯೆ ವಿಷ ಸೇವಿಸಿದ ಕೆಂಪುಕಲ್ಲು ಕ್ವಾರಿ ಮಾಲಿಕ-ಗಂಭೀರ, ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ

ಕಾಸರಗೋಡು: ವಿಧ ಬೇಡಿಕೆ ಮುಂದಿರಿಸಿ ಜಿಲ್ಲಾಧಿಕಾರಿ ಕಚೇರಿ ವಠಾರದಲ್ಲಿ ಕೆಂಪುಕಲ್ಲು ಕ್ವಾರಿ ಮಾಲಿಕರು ನಡೆಸಿಕೊಂಡು ಬರುತ್ತಿರುವ ಅನಿರ್ಧಿಷ್ಠಾವಧಿ ನಿರಾಹಾರ ಮುಷ್ಕರದ ಮಧ್ಯೆ ಕ್ವಾರಿ ಮಾಲಿಕರೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡರದಿದೆ. 

ನೀಲೇಶ್ವರ ಮಲ್ಲಚ್ಚೇರಿ ನಿವಾಸಿ, ಕಲ್ಲು ಕ್ವಾರಿ ಅಸೋಸಿಯೇಶನ್ ಜಿಲ್ಲಾ ಉಪಾಧ್ಯಕ್ಷ   ಗೋಪಾಲಕೃಷ್ಣನ್ ಆತ್ಮಹತ್ಯೆಗೆ ಶ್ರಮಿಸಿದವರು. ಮುಷ್ಕರ ಚಪ್ಪರದೊಳಗೆ ಪ್ರತಿಭಟನೆ ನಡೆಯುತ್ತಿದ್ದಂತೆ ಅಸೌಖ್ಯಪೀಡಿತರಾಗಿ ಕುಸಿದು ಬಿದ್ದ ಇವರನ್ನು ಜತೆಗಿದ್ದವರು ಆಸ್ಪತ್ರೆಗೆ ದಾಖಲಿಸಿದ್ದಾರೆ. ವಿಷ ಹೊಟ್ಟೆಯೊಳಗೆ ಸೇರಿರುವುದನ್ನು ವೈದ್ಯರು ಖಚಿತಪಡಿಸಿದ್ದಾರೆ.

ಮಂಗಳವಾರ ತಡರಾತ್ರಿ ವರೆಗೂ ಇವರು ಚೀಟಿಯಲ್ಲಿ ಏನೋ ಬರೆಯುತ್ತಿದ್ದು, ಇದು ಮುಷ್ಕರಕ್ಕೆ ಸಂಬಂಧಿಸಿದ ಘೋಷಣೆಯಾಗಿರಬೇಕೆಂದು ಜತೆಗಿದ್ದವರು  ಊಹಿಸಿದ್ದರು. ಇವರ ಜೇಬಿನಿಂದ ಆತ್ಮಹತ್ಯೆಗೆ ಸಂಬಂಧಿಸಿದ ಡೆತ್ ನೋಟ್ ವಶಪಡಿಸಲಾಗಿದ್ದು, ಇದರಲ್ಲಿ ಸಾಲಬಾಧೆಯಿಂದ ಕ್ವಾರಿ ಮುಂದುವರಿಸುವುದು ಅಸಾಧ್ಯವಾಗಿದ್ದು, ಇದಕ್ಕಾಗಿ ಆತ್ಮಹತ್ಯೆಗೆ ಶರಣಾಗುವುದಾಗಿ ನಮೂದಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿ ವಿದ್ಯಾನಗರ ಠಾಣೆ ಪೆÇಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಡಿಸಿ ಕಚೇರಿ ಎದುರು ಪ್ರತಿಭಟನೆ:

ಕೆಂಪುಕಲ್ಲು ಕ್ವಾರಿ ಮಾಲಿಕರ ಕ್ಷೇಮಾಭಿವೃದ್ಧಿ ಸಂಘ ವಿವಿಧ ಬೇಡಿಕೆ ಮುಂದಿರಿಸಿ ವಿದ್ಯಾನಗರ ಜಿಲ್ಲಾಧಿಕಾರಿಕಚೇರಿ ಎದುರು ನಡೆಸಿಕೊಂಡು ಬರುತ್ತಿರುವ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಏಳನೇ ದಿನಕ್ಕೆ ಕಾಲಿರಿಸಿದ್ದು, ಬುಧವಾರ ಉಪವಾಸನಿರತ ಮಾಲಿಕರು ಹಾಗೂ ಕಾರ್ಮಿಕರು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.  

ಕೆಂಪುಕಲ್ಲು ಕ್ವಾರಿ ಮಾಲಿಕರ ವಿರುದ್ಧ ಅಧಿಕಾರಿಗಳು ನಡೆಸುತ್ತಿರುವ ದೌರ್ಜನ್ಯ ಕೊನೆಗೊಳಿಸುವಂತೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.  

ಜಿಲ್ಲೆಯಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಕಾರ್ಮಿಕರು ನೇರವಾಗಿ ಜೀವನ ನಿರ್ವಹಿಸುತ್ತಿರುವ ಕೆಂಪುಕಲ್ಲು ಕ್ವಾರಿ ವಲಯಕ್ಕೆ ನ್ಯಾಯಸಮ್ಮತ ಪರವಾನಗಿ ನೀಡುವುದರ ಬದಲು, ಒಂದು ವಿಭಾಗ ಅಧಿಕಾರಿ ವರ್ಗ ತಮಗೆ ತೋಚಿದಂತೆ ಕಾನೂನು ಜಾರಿ ಮಾಡುವ ಮೂಲಕ ಈ ವಲಯವನ್ನು ದಮನಿಸಲು ಯತ್ನಿಸುತ್ತಿದೆ. ಕೆಂಪುಕಲ್ಲು ಕ್ವಾರಿ ಮಾಲಿಕರಿಗೆ ನಿರಂತರ ಕಿರುಕುಳ ನೀಡಲಾಗುತ್ತಿರುವುದು ಖಂಡನೀಯ ಎಂದು ತಿಳಿಸಿದ್ದಾರೆ.  



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries