ನವದೆಹಲಿ: ಮುಂಬೈನ ಅನ್ಸ್ರ್ಟ್ ಅಂಡ್ ಯಂಗ್ ಕಂಪನಿಯ ಮಲಯಾಳಿ ಉದ್ಯೋಗಿ ಅನ್ನಾ ಸೆಬಾಸ್ಟಿಯನ್ ಸಾವಿನ ಪ್ರಕರಣದಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮಧ್ಯಪ್ರವೇಶಿಸಿದೆ. ಆಯೋಗವು ವೃತ್ತಿ ಕಿರುಕುಳ ಪ್ರಕರಣ ದಾಖಲಿಸಿದೆ.
ಅನ್ನಾ ಸೆಬಾಸ್ಟಿಯನ್ ಸಾವಿಗೆ ಕೆಲಸದ ಹೊರೆಯೇ ಕಾರಣ ಎಂದು ಮಾನವ ಹಕ್ಕುಗಳ ಆಯೋಗ ತೀವ್ರ ಕಳವಳ ವ್ಯಕ್ತಪಡಿಸಿದ್ದು, ನಾಲ್ಕು ವಾರಗಳಲ್ಲಿ ಕೇಂದ್ರ ಕಾರ್ಮಿಕ ಸಚಿವಾಲಯ ವರದಿ ಸಲ್ಲಿಸಬೇಕು ಎಂದು ಮಾನವ ಹಕ್ಕುಗಳ ಆಯೋಗ ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.
ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದ ಯುವತಿಗೆ ಅರ್ನೆಸ್ಟ್ ಅಂಡ್ ಯಂಗ್ ಕಂಪನಿಯಲ್ಲಿ ಮೊದಲ ಉದ್ಯೋಗ ಲಭಿಸಿತ್ತು. ಅನ್ನಾ ಸೆಬಾಸ್ಟಿಯನ್ ಅವರ ತಂದೆ ಬಹಿರಂಗ ಪಡಿಸಿರುವಂತೆ ಆಕೆಗೆ ಮಲಗಲು, ಆಹಾರ ಸೇವಿಸಲೂ ಸಹ ಸಮಯ ಲಭಿಸುತ್ತಿರಲಿಲ್ಲ ಎಂದಿರುವುದು ಗಂಭೀರವಾಗಿದೆ. ಪುಣೆಯಲ್ಲಿರುವ ತಮ್ಮ ಕಛೇರಿಯಿಂದ ರಾತ್ರಿ ತಮ್ಮ ನಿವಾಸವನ್ನು ತಲುಪಿದ ನಂತರವೂ ಅವರು ರಜಾದಿನಗಳಲ್ಲಿ ಕೆಲಸ ಮಾಡಬೇಕಾಗಿತ್ತು.
ಕೆಲಸದ ಒತ್ತಡದಿಂದ ಅನ್ನಾ ಹೃದಯಾಘಾತದಿಂದ ನಿಧನರಾದರು. ಕೇಂದ್ರದ ಮಾಜಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು ಕೇಂದ್ರ ಕಾರ್ಮಿಕ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಎಕ್ಸ್ ಮೂಲಕ ದೂರು ಸಲ್ಲಿಸಿದ ನಂತರ ಸಚಿವರು ಈ ವಿಷಯದಲ್ಲಿ ಮಧ್ಯಪ್ರವೇಶಿಸಿದರು.