HEALTH TIPS

ತಂದೆ ಇದ್ದ ವಿಮಾನ ಹೈಜಾಕ್ ಆಗಿದ್ದನ್ನು ನೆನಪಿಸಿಕೊಂಡ ವಿದೇಶಾಂಗ ಸಚಿವ ಎಸ್ ಜೈಶಂಕರ್

ಜೆನಿವಾ: ವಿದೇಶಾಂಗ ಸಚಿವ ಎಸ್ ಜೈಶಂಕರ್ ತಮ್ಮ ತಂದೆ ಇದ್ದ ವಿಮಾನ ಹೈಜಾಕ್ ಆಗಿದ್ದನ್ನು ನೆನಪಿಸಿಕೊಂಡಿದ್ದಾರೆ.

ಜೆನಿವಾದಲ್ಲಿ ನಡೆದ ಸಮುದಾಯದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಜೈಶಂಕರ್, ತಮ್ಮ ತಂದೆ ಇದ್ದ ವಿಮಾನ ಹೈಜಾಕ್ ಆಗಿದ್ದನ್ನು ನೆನಪಿಸಿಕೊಂಡು ಅಂತಹ ಸಂದರ್ಭಗಳಲ್ಲಿ ಕುಟುಂಬದ ಸದಸ್ಯರು ಹಾಗೂ ಸರ್ಕಾರದಲ್ಲಿರುವವರ ಪರಿಸ್ಥಿತಿಗಳನ್ನು ಅರ್ಥ ಮಾಡಿಕೊಂಡಿದ್ದೆ ಎಂದು ಹೇಳಿದ್ದಾರೆ.

ಈ ಕಾರ್ಯಕ್ರಮದಲ್ಲಿ 1999 ರಲ್ಲಿ ಕಂದಹಾರ್ ವಿಮಾನ ಅಪಹರಣಕ್ಕೆ ಒಳಗಾಗಿದ್ದ ಕಥೆಯನ್ನಾಧರಿಸಿದ IC814 ನೆಟ್ ಫ್ಲಿಕ್ಸ್ ವೆಬ್ ಸೀರಿಸ್ ಕುರಿತ ಪ್ರಶ್ನೆಯೊಂದಕ್ಕೆ ಜೈಶಂಕರ್ ಪ್ರತಿಕ್ರಿಯೆ ನೀಡುತ್ತಿದ್ದರು.

ಜೈಶಂಕರ್ ಅವರು ಯುವ ಅಧಿಕಾರಿಯಾಗಿ ಒಂದೆಡೆ ಹೈಜಾಕ್ ಪರಿಸ್ಥಿತಿಯನ್ನು ನಿಭಾಯಿಸುವ ತಂಡದ ಭಾಗವಾಗಿದ್ದರು ಮತ್ತು ಇನ್ನೊಂದೆಡೆ ಸರ್ಕಾರದ ಮೇಲೆ ಒತ್ತಡ ಹೇರುವ ಕುಟುಂಬಗಳ ಗುಂಪಿನ ಭಾಗವಾಗಿದ್ದರು ಎಂಬುದನ್ನು ಪ್ರೇಕ್ಷಕರೊಂದಿಗೆ ಹಂಚಿಕೊಂಡಿದ್ದಾರೆ.

ಭಾರತೀಯ ಸಮುದಾಯವನ್ನುದ್ದೇಶಿಸಿ ಅವರು ಮಾಡಿದ ಭಾಷಣದ ನಂತರ ಪ್ರಶ್ನೋತ್ತರ ಅವಧಿಯಲ್ಲಿ, ಸಭಿಕರೊಬ್ಬರು ಇತ್ತೀಚೆಗೆ ಬಿಡುಗಡೆಯಾದ ಸರಣಿ IC814: ದಿ ಕಂದಹಾರ್ ಹೈಜಾಕ್ ಸೀರೀಸ್ ನಲ್ಲಿ ಸರ್ಕಾರ ಹಾಗೂ ಅಧಿಕಾರಿಗಳು ಸೂಕ್ತವಾಗಿ ವ್ಯವಹರಿಸಲಿಲ್ಲ ಎಂದು ತೋರಿಸಿರುವುದರ ಬಗ್ಗೆ ಜೈಶಂಕರ್ ಅವರನ್ನು ಪ್ರಶ್ನಿಸಲಾಗಿತ್ತು. ತಾನು ಸರಣಿಯನ್ನು ವೀಕ್ಷಿಸಿಲ್ಲ ಎಂದು ಹೇಳಿರುವ ಜೈಶಂಕರ್, ಹೈಜಾಕ್ ಘಟನೆಯೊಂದಿಗೆ ತಮ್ಮ ವೈಯಕ್ತಿಕ ಅನುಭವವನ್ನು ಬಹಿರಂಗಪಡಿಸಿದರು.

"1984 ರಲ್ಲಿ ಘಟನೆ ನಡೆದಾಗ ನಾನು ತುಂಬಾ ಕಿರಿಯ ಅಧಿಕಾರಿಯಾಗಿದ್ದೆ. ಅದನ್ನು ನಿಭಾಯಿಸುತ್ತಿದ್ದ ತಂಡದ ಭಾಗವಾಗಿ ನಾನೂ ಇದ್ದೆ. ನಾನು ನಿಜವಾಗಿಯೂ ನನ್ನ ತಾಯಿಗೆ ಫೋನ್ ಮಾಡಿ, "ನೋಡು, ನಾನು ಬರಲು ಸಾಧ್ಯವಿಲ್ಲ. ಒಂದು ಅಪಹರಣವಾಗಿದೆ, ಪತ್ನಿಯೂ ಕೆಲಸ ಮಾಡುತ್ತಿದ್ದರಿಂದ ನಾನು ಮನೆಗೆ ಹೋಗಿ ತಮ್ಮ ಮಗನಿಗೆ ಆಹಾರವನ್ನೂ ನೀಡಬೇಕು" ಎಂದು ತಾಯಿಗೆ ಹೇಳಿದ್ದನ್ನು ಸ್ಮರಿಸಿದ್ದಾರೆ.

ಅಂದು ಹೈಜಾಕ್ ಆದ ವಿಮಾನದಲ್ಲಿ ತನ್ನ ತಂದೆಯೂ ಇದ್ದರೆಂಬುದನ್ನು ನಂತರ ನಾನು ಕಂಡುಕೊಂಡೆ. ವಿಮಾನ ದುಬೈನಲ್ಲಿ ಕೊನೆಗೊಂಡಿತ್ತು. ಇದು ಸುದೀರ್ಘ ಕಥೆಯಾಗಿದೆ, ಆದರೆ ಅದೃಷ್ಟವಶಾತ್, ಯಾರೂ ಕೊಲ್ಲಲ್ಪಟ್ಟಿಲ್ಲ. ಇದು ಸಮಸ್ಯೆಯಾಗಿ ಕೊನೆಗೊಳ್ಳಬಹುದಿತ್ತು, ”ಎಂದು ಅವರು ಹೇಳಿದರು.

ಆಗಸ್ಟ್ 24, 1984 ರಂದು, ದೆಹಲಿಯಿಂದ ಶ್ರೀನಗರಕ್ಕೆ ತೆರಳುತ್ತಿದ್ದ ಇಂಡಿಯನ್ ಏರ್‌ಲೈನ್ಸ್ ವಿಮಾನವನ್ನು ಪಠಾಣ್‌ಕೋಟ್‌ನಲ್ಲಿ ಹೈಜಾಕ್ ಮಾಡಲಾಯಿತು ಮತ್ತು ಅಂತಿಮವಾಗಿ ದುಬೈಗೆ ಕರೆದೊಯ್ಯಲಾಯಿತು. 36 ಗಂಟೆಗಳಿಗೂ ಹೆಚ್ಚು ಸಮಯದ ನಂತರ, 12 ಖಲಿಸ್ತಾನಿ ಪರ ಅಪಹರಣಕಾರರು ಅಧಿಕಾರಿಗಳಿಗೆ ಶರಣಾದರು ಮತ್ತು ಎಲ್ಲಾ 68 ಪ್ರಯಾಣಿಕರು ಮತ್ತು ಆರು ಸಿಬ್ಬಂದಿಯನ್ನು ಹಾನಿಗೊಳಗಾಗದೆ ಬಿಡುಗಡೆ ಮಾಡಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries