ಮುಂಬೈ: ಬಾಲಿವುಡ್ ಸ್ಟಾರ್ಗಳ ಪೈಕಿ ತಮ್ಮ ವಿವಾದಾತ್ಮಕ ಹೇಳಿಕೆಯಿಂದಲೇ ಸದಾ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸದ್ದು ಮಾಡುವ ಸ್ಟಾರ್ ನಟಿ, ಸಂಸದೆ ಕಂಗನಾ ರಣಾವತ್, ಇದೀಗ ಮತ್ತೊಮ್ಮೆ ವಿವಾದಕ್ಕೆ ಸಿಲುಕಿದ್ದು, ಈ ಬಾರಿ ತಮ್ಮ ಹೇಳಿಕೆಗಲ್ಲ! ಬದಲಿಗೆ ಹೊಸ ಸಿನಿಮಾದ ಬಿಡುಗಡೆ ವಿಷಯಕ್ಕೆ.

ಕಂಗನಾ ರಣಾವತ್ ನಟಿಸಿ, ನಿರ್ದೇಶಿಸಿರುವ ಎಮರ್ಜೆನ್ಸಿ ಚಿತ್ರ ಬಿಡುಗಡೆಗೆ ಕೇವಲ ನಾಲ್ಕು ದಿನಗಳ ಬಾಕಿ ಉಳಿದಿದೆ ಅಷ್ಟೇ. ಈ ಮಧ್ಯೆಯೇ ಚಿತ್ರತಂಡಕ್ಕೆ ಚಲನಚಿತ್ರ ಸೆನ್ಸಾರ್ ಮಂಡಳಿ ಶಾಕ್ ನೀಡಿದ್ದು, ಸೆನ್ಸಾರ್ ಪ್ರಮಾಣ ಪತ್ರಿಕೆಯನ್ನು ಇನ್ನು ಚಿತ್ರತಂಡಕ್ಕೆ ಹಸ್ತಾಂತರಿಸಿಲ್ಲ. ಸದ್ಯ ಈ ವಿಷಯ ನಟಿಯ ಕೆಂಡಾಮಂಡಲಕ್ಕೆ ಕಾರಣವಾಗಿದೆ. ಚಿತ್ರದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ನಟಿಸಿರುವ ರಣಾವತ್ ಅವರ ಒಂದಷ್ಟು ಸೀನ್ಗಳನ್ನು ಸೆನ್ಸಾರ್ ಮಂಡಳಿ ಕಟ್ ಮಾಡಿದೆ ಎಂದು ಹೇಳಲಾಗಿದೆ. ಸಿನಿಮಾದ ಅನ್ ಕಟ್ ವರ್ಷನ್ ನನಗೆ ಸಿಗದೆ ಹೋದರೆ ಖಂಡಿತ ನಾನು ಅನುಮತಿ ಕೋರಿ ನ್ಯಾಯಾಲಯದ ಮೊರೆ ಹೋಗುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಕಂಗನಾ, 'ನನ್ನ ಚಿತ್ರದ ಮೇಲೂ ಎಮರ್ಜೆನ್ಸಿ ಹೇರಿದ್ದಾರೆ. ಇದು ಅತ್ಯಂತ ಹತಾಶ ಸ್ಥಿತಿ. ನಮ್ಮ ದೇಶದಲ್ಲಿ ಇಂತಹ ಘಟನೆಗಳಿಂದ ತೀವ್ರ ಅಸಮಾಧಾನ ಉಂಟಾಗಿದೆ. ಇನ್ನೆಷ್ಟು ಸಹಿಸಿಕೊಳ್ಳಬೇಕು? ಭಯಪಡಬೇಕು' ಎಂದು ನಟಿ ಅತೀವ ಬೇಸರ ಹೊರಹಾಕಿದ್ದಾರೆ.