HEALTH TIPS

ಇಸ್ರೇಲ್‌-ಪ್ಯಾಲೆಸ್ಟೀನ್‌ ಮಧ್ಯೆ ಕದನ ವಿರಾಮಕ್ಕೆ ಭಾರತ ಬೆಂಬಲ: ಎಸ್‌.ಜೈಶಂಕರ್

          ರಿಯಾದ್‌: ಗಾಜಾದಲ್ಲಿ ಇಸ್ರೇಲ್‌-ಪ್ಯಾಲೆಸ್ಟೀನ್‌ ಮಧ್ಯೆ ಆರಂಭವಾಗಿರುವ ಯುದ್ಧಕ್ಕೆ ಆದಷ್ಟು ಶೀಘ್ರ ಕದನವಿರಾಮ ಘೋಷಣೆಯಾಗಲಿ. ಅದಕ್ಕೆ ಭಾರತವು ಬೆಂಬಲ ನೀಡುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್ ಸೋಮವಾರ ಹೇಳಿದರು.

           ರಿಯಾದ್‌ನಲ್ಲಿ ನಡೆದ ಭಾರತ-ಗಲ್ಫ್ ಸಹಕಾರ ಮಂಡಳಿಯ (ಜಿಸಿಸಿ) ವಿದೇಶಾಂಗ ವ್ಯವಹಾರಗಳ ಸಚಿವರ ಸಭೆಯಲ್ಲಿ ಜೈಶಂಕರ್ ಅವರು ಈ ಮಾತು ಹೇಳಿದರು.

           'ಇಸ್ರೇಲ್‌-ಪ್ಯಾಲೆಸ್ಟೀನ್‌ ಸಂಘರ್ಷದ ವಿಚಾರದಲ್ಲಿ ಭಾರತದ ನಿರ್ಧಾರವು ಸ್ಥಿರವಾಗಿದೆ. ಭಯೋತ್ಪಾದನೆ ಮತ್ತು ಒತ್ತೆಯಾಳುಗಳಾಗಿ ಹೊತ್ತೊಯ್ಯುವುದನ್ನು ಖಂಡಿಸುತ್ತೇವೆ. ಹಾಗೆಯೇ ಈ ಸಂಘರ್ಷದಲ್ಲಿ ಮುಗ್ಧ ನಾಗರಿಕರು ಮೃತಪಡುತ್ತಿರುವ ಬಗ್ಗೆ ತೀವ್ರ ಸಂಕಟವೂ ಆಗುತ್ತಿದೆ' ಎಂದರು.

ಉಭಯ ದೇಶಗಳು ಮಾತುಕತೆ ಮೂಲಕ ಸಮಸ್ಯೆ ಇತ್ಯರ್ಥಪಡಿಸಿಕೊಳ್ಳಬೇಕು ಎಂಬುದು ಭಾರತದ ಸಲಹೆ ಎಂದೂ ಹೇಳಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries